ಸೇವಾಲಾಲ್ ಮಹಾರಾಜರ ಜಯಂತಿಗೆ ಬಿ.ವೈ ವಿಜಯೇಂದ್ರ ಅವರಿಗೆ ಆಮಂತ್ರಣ

ವಾಡಿ: ಫೆ.15 ರಂದು ಪಟ್ಟಣದಲ್ಲಿ ನಡೆಯುವ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತೋತ್ಸವ ಸಮಾರಂಭಕ್ಕೆ ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಬಂಜಾರ ಸಮಾಜದ ಮುಖಂಡರು ಆಹ್ವಾನಿಸಿದರು. ಸೇಡಂ ತಾಲೂಕಿನ ಬೀರನಳ್ಳಿಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಬಿ.ವೈ ವಿಜಯೇಂದ್ರ ಅವರನ್ನು ಕಲಬುರಗಿಯಲ್ಲಿ ಭೇಟಿಯಾಗಿ ಆಮಂತ್ರಿಸಿದರು. ಪಟ್ಟಣದಲ್ಲಿ ಸುಮಾರು ಇಪ್ಪತ್ನಾಲ್ಕು ವರ್ಷಗಳಿಂದ ಬಂಜಾರ ಸಮಾಜದ ಮುಖಂಡರು ಸಂಪ್ರದಾಯದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಭಾಗದ ಸ್ವಾಮಿಜಿಗಳು, ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿ […]

Continue Reading

ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವದು ಅವಶ್ಯಕ: ಡಿವೈಎಸ್ಪಿ ಶಂಕರಗೌಡ ಪಾಟೀಲ

ಸುದ್ದಿ ಸಂಗ್ರಹ ಶಹಾಬಾದವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು. ನಗರದ ಶ್ರೀಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಸಂಸ್ಥೆಯ ವಿವಿಧ ಪ್ರಕಲ್ಪಗಳ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಮಾನ್ಯರಲ್ಲಿ ಅಸಾಮಾನ್ಯರಾಗಿ ಗುರುತಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬಹುದು,  ವಿದ್ಯಾರ್ಥಿಗಳು ತಮಗೆ ಸಿಗುವ ಸಮಯದ ಮಹತ್ವ ಅರಿತು ಪ್ರತಿ ದಿನ, ಪ್ರತಿಕ್ಷಣವನ್ನು ಸದ್ವಿನಿಯೋಗ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳು ತಮ್ಮ ಗುರಿಯೊಂದಿಗೆ ಉತ್ತಮ ಯೋಜನೆ ಹಾಕಿಕೊಳ್ಳಬೇಕು ಎಂದರು.  […]

Continue Reading

ನಾಲ್ಕು ಸಾವಿರಕ್ಕೂ ಹೆಚ್ಚು ಶಾಲೆಗಳು ಮುಚ್ಚಲು ರಾಜ್ಯ ಸರ್ಕಾರ ಯತ್ನ: ಎಐಡಿಎಸ್ಓ ಪ್ರತಿಭಟನೆ

ಸುದ್ದಿ ಸಂಗ್ರಹ ಶಹಾಬಾದಅತಿ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಮಕ್ಕಳ ಹಿತಾಸಕ್ತಿಯನ್ನು ಕಾಯ್ದುಕೊಂಡು ಸದರಿ ಶಾಲೆಗಳನ್ನು ಸಂಯೋಜಿತ ಸೂಚಿಸುತ್ತಿದೆ. ಈ ಸಂಯೋಜಿತ ಶಾಲೆಗಳನ್ನು ಹಬ್ ಹ್ಯಾಂಡ್ ಸ್ಟೋಕ್ ಮಾಡಲು ಎಂಬ ನಾಮಕರಣ ಹೆಸರಿನಲ್ಲಿ ರಾಜ್ಯದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ಈ ನಡೆಯನ್ನು ಖಂಡಿಸಿ ಎಐಡಿಎಸ್ಓ ಸಂಘಟನೆಯ ಜಿಲ್ಲಾ ಖಜಾಂಚಿ ವೆಂಕಟೇಶ್ ಹೇಳಿದರು. ನಗರದ ನೆಹರೂ ಚೌಕ್ ನಲ್ಲಿ ಎಐಡಿಎಸ್ಓ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, […]

Continue Reading

ಜ.28 ರಂದು ಅಂಬಿಗರ ಚೌಡಯ್ಯನ ಮೂರ್ತಿ ಬೃಹತ್ ಶೋಭಾಯಾತ್ರೆ

ಚಿತ್ತಾಪುರ: ಬಸವಾದಿ ಶರಣರಲ್ಲಿ ನಿಜ ಶರಣ ಎನಿಸಿಕೊಂಡಿರುವ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವದ ನಿಮಿತ್ಯ ತಾಲೂಕು ಕೋಲಿ ಸಮಾಜದಿಂದ ಹಿರಿಯ ಮುಖಂಡ ಭೀಮಣ್ಣಾ ಸಾಲಿ ನೇತೃತ್ವದಲ್ಲಿ ಜ.28 ರಂದು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನರ, ಪ್ರಧಾನ ಕಾರ್ಯದರ್ಶಿ ಕರಣಕುಮಾರ ಅಲ್ಲೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಟ್ಟಣದ ಅಂಬಿಗರ ಚೌಡಯ್ಯ ಭವನದ ಸಮೀಪ ಜ.28 ರಂದು ಮಧ್ಯಾಹ್ನ 1 ಗಂಟೆಗೆ ಶೋಭಾಯಾತ್ರೆಯಲ್ಲಿ ತೊನಸನಹಳ್ಳಿ (ಎಸ್) ಗ್ರಾಮದ […]

Continue Reading

ಕನ್ನಡ ಸಾಹಿತ್ಯಕ್ಕೆ ಜನಪದ ಕೊಡುಗೆ ಅಪಾರ

ಸುದ್ದಿ ಸಂಗ್ರಹ ಶಹಾಬಾದಕನ್ನಡ ನಾಡು, ನುಡಿ, ಸುಗ್ಗಿಯ ಸಂಭ್ರಮ, ಪರಂಪರೆ ಬಗ್ಗೆ ಇಂದಿನ ಪಿಳಿಗೆಗೆ ಜೋಗುಳ ಪದ, ಹಂತಿಯ ಹಾಡು ಕನ್ನಡ ಸಾಹಿತ್ಯಕ್ಕೆ ಜನಪದ ಕೊಡುಗೆ ಅಪಾರ ಅದನ್ನು ಉಳಿಸಿ ಮುಂದಿನ ಪಿಳಿಗೆಗ ಕೊಂಡೊಯ್ಯುವದು ಯುವ ಜನರ ಕರ್ತವ್ಯವಾಗಿದೆ ಎಂದು ಕನ್ನಡ ಜಾನಪದ ಅಧ್ಯಕ್ಷ ರಾಜಶೇಖರ ದೇವರಮನಿ  ಹೇಳಿದರು.‌ ನಗರದ ಕೂಡಲ ಸಂಗಮ ಶಿಕ್ಷಣ ಸಂಸ್ಥೆ ಶಾಲೆ ಹಳೆ ಶಹಾಬಾದ ಆವರಣಲ್ಲಿ ಕನ್ನಡ ಜಾನಪದ ಪರಿಷತ್ತು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸುಗ್ಗಿಯ ಸಂಭ್ರಮ’ ಹಾಗೂ ‘ಮಕ್ಕಳ ವೇಷಭೂಷಣ ಸ್ಪರ್ಧೆ’ಯಲ್ಲಿ 5 […]

Continue Reading

ವಾಡಿ: ಬಿಜೆಪಿ ಕಛೇರಿಯಲ್ಲಿ ಶೌರ್ಯ ದಿನ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಆಚರಿಸಲಾಯಿತು….ಈ ವೇಳೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೆನೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಈ ಅಪ್ರತಿಮ ಘೋಷ ವಾಕ್ಯ ಭಾರತ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಲಕ್ಷಾಂತರ ಜನರ ಹೃದಯದಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಪ್ರಜ್ವಲಿಸುವಂತೆ ಮಾಡಿತು ಎಂದರು. ಇಂದು ಈ ಮಹಾನ್ ನಾಯಕನ 128ನೇ ಜನ್ಮ ವಾರ್ಷಿಕೋತ್ಸವವನ್ನು ನಾವು […]

Continue Reading

ಬಿಜೆಪಿ ಕಛೇರಿಯಲ್ಲಿ ಮನ್ ಕಿ ಬಾತ್ ಆಲಿಸಿದ ಮುಖಂಡರು

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ಮೋದಿಯವರ ಈ ವರ್ಷದ ಮೊದಲ ಮನ್​ ಕಿ ಬಾತ್​ ರೆಡಿಯೊ ಕಾರ್ಯಕ್ರಮದ 118ನೇ ಸಂಚಿಕೆ ಆಲಿಸಿದ ಮುಖಂಡರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಪ್ರಧಾನಿ ಮೋದಿ ಅವರು ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸಿ ಅವರ ಶೌರ್ಯವನ್ನು ಯುವಕರು ಇನ್ನಷ್ಟು ಅರಿಯಬೇಕು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿ ಪಡೆಯಬೇಕು ಎಂದರು. 2025ರ ಮೊದಲ ಮನ್ […]

Continue Reading

ತಾಲೂಕು ಕೋಲಿ ಸಮಾಜ ಒಗ್ಗೂಡಿಸಿದ್ದು ಕಮಕನೂರ, ಒಡಕು ಮೂಡಿಸಿದ್ದು ಭೀಮಣ್ಣ ಸಾಲಿ

ಚಿತ್ತಾಪುರ: ಕೋಲಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾಜವನ್ನು ಸಂಘಟಿಸಿ ಒಗ್ಗೂಡಿಸುವ ಕೆಲಸ ಕೋಲಿ ಗಂಗಾಮತ ಸಮಾಜದ ರಾಜ್ಯ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದು ಅಂಬಿಗರ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಶರಣಪ್ಪ ನಾಟಿಕಾರ್ ಹಾಗೂ ತಾಲೂಕು ಕೋಲಿ ಸಮಾಜದ ಗೌರವಾಧ್ಯಕ್ಷ ಭೀಮಣ್ಣ ಸೀಬಾ ಹೇಳಿದರು.  ಪಟ್ಟಣದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರದ ಹಿರಿಯ ಮುಖಂಡರೆನಿಸಿಕೊಂಡಿರುವ ಭೀಮಣ್ಣ ಸಾಲಿ ಅವರು ತಮ್ಮ ಸ್ವಾರ್ಥಕ್ಕಾಗಿ ಮತ್ತು ತಮ್ಮ […]

Continue Reading

ಓರಿಯಂಟ್ ಸಿಮೆಂಟ್ ಕಂಪೆನಿ ಮುಖ್ಯಸ್ಥ ಸತ್ಯಬ್ರರ್ತ್ ವಿರುದ್ಧ ಹೋರಾಟಕ್ಕೆ ಸಿದ್ಧತೆ: ಅಶ್ವಥ ರಾಠೋಡ

ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದ ಸಮೀಪದ ಓರಿಯಂಟ್ ಸಿಮೆಂಟ್ ಕಂಪೆನಿಯಿಂದ ನಕಲಿ ಪತ್ರ ಸೃಷ್ಟಿಸಿ, ಕೆಎ.32 ಎಬಿ.2200 ಸಂಖ್ಯೆಯ ಲಾರಿ ಲೋಡ್ ಮಾಡುವುದನ್ನು ತಡೆಹಿಡಿದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ ಕಂಪೆನಿಯ ಮುಖ್ಯಸ್ಥ ಸತ್ಯಬ್ರರ್ತ್ ವಿರುದ್ಧ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯವಾದಿ, ಬಿಜೆಪಿ ಮುಖಂಡ ಅಶ್ವಥರಾಮ ರಾಠೋಡ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಸಿಪಿಐ ಕಚೇರಿಯಿಂದ ಹೋದ ನಕಲಿ ಪತ್ರವನ್ನು ಎಫ್’ಎಸ್’ಎಲ್ ಕಳುಹಿಸಿ ಸಮಗ್ರ ತನಿಖೆ ನಡೆಸಿದಾಗ ಮಾತ್ರ ಸತ್ಯಾಸತ್ಯತೆ ಹೊರಬರಲಿದೆ, ಫೇಕ್ […]

Continue Reading

ಅಯ್ಯಪ್ಪ ಸ್ವಾಮಿ ಮಹಾಪಡಿ ಪೂಜೆ: ಭಕ್ತಿಯಲ್ಲಿ ಮಿಂದೆದ್ದ ಅಯ್ಯಪ್ಪ ಮಾಲಧಾರಿಗಳು

ಚಿತ್ತಾಪುರ: ಪಟ್ಟಣದ ಬಾಲಾಜಿ ಮಂದಿರದ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ 20ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪಡಿ ಪೂಜಾ ಕಾರ್ಯಕ್ರಮ ಆನಂದಕುಮಾರ ಗುರುಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ಶ್ರದ್ಧೆ ಭಕ್ತಿ, ಸಂಭ್ರಮ, ಸಡಗರದಿಂದ ಅದ್ಧೂರಿಯಾಗಿ ನಡೆಯಿತು. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಭಕ್ತಿಯಲ್ಲಿ ಮಿಂದೆದ್ದರು. ಶ್ರೀಕಾಂತ ಲಂಭೋದರ ಗುರುಸ್ವಾಮಿ ಹಾಗೂ ಅವರ ತಂಡದಿಂದ ನವಗೃಹ ಪೂಜೆ, ಗಣಪತಿ ಪೂಜೆ, ಲಕ್ಷ್ಮಿ ಪೂಜೆ, ಸುಬ್ರಹ್ಮಣ್ಯ ಪೂಜೆ, ಅಯ್ಯಪ್ಪ ಅಭಿಷೇಕ ಹಾಗೂ ಮಹಾಪಡಿ ಪೂಜೆ ನಡೆಯಿತು. ಕಾರ್ತಿಕ ನಾರಾಯಣಪೇಟ್ ಅವರ ತಂಡದಿಂದ ಅಯ್ಯಪ್ಪ ಭಕ್ತಿಗೀತೆಗಳ ಸಂಗೀತ […]

Continue Reading