ನವದೆಹಲಿ: ಅಸ್ಸಾಂನ ಸುವಾಸನೆ ಭರಿತ ಚಹಾಪುಡಿ, ಕಾಶ್ಮೀರಿ ಕೇಸರಿ, ಕರಕುಶಲ ಬೆಳ್ಳಿಯ ಕುದುರೆ, ಬೆಳ್ಳಿಯ ಟೀ ಸೆಟ್, ಚೆಸ್ ಬೋರ್ಡ್ ಮತ್ತು ರಷ್ಯನ್ ಆವೃತ್ತಿಯ ಭಗವದ್ಗೀತೆಯ ಪ್ರತಿ ಇವೆಲ್ಲವೂ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ ವಸ್ತುಗಳು.
ಮುರ್ಷಿದಾಬಾದ್ನ ಕರಕುಶಲ ಕಲಾವಿದರು ಬೆಳ್ಳಿಯ ಟೀ ಸೆಟ್ ತಯಾರಿಸಿದ್ದರೆ, ಬೆಳ್ಳಿಯ ಕುದುರೆಯನ್ನು ಮಹಾರಾಷ್ಟ್ರದ ಕಲಾವಿದರು ತಯಾರಿಸಿದ್ದಾರೆ. ಅದೆ ರೀತಿ ಪುಟಿನ್ ಅವರಿಗೆ ನೀಡಲಾದ ಚೆಸ್ ಆಟದ ಬೋರ್ಡನ್ನು ವಿಶೇಷವಾಗಿ ಅಮೃತಶಿಲೆಯಿಂದ ತಯಾರಿಸಲಾಗಿದ್ದು, ಇದರ ಹಿಂದೆ ಆಗ್ರಾದ ಕಲಾವಿದರ ಕೈಚಳಕವಿದೆ.