ಕಾರು, ಮೊಬೈಲ್, ಕಂಪ್ಯೂಟರ್ ಹೊಸ ಜಿಎಸ್‌ಟಿ ಅಡಿ ಯಾವೆಲ್ಲಾ ವಸ್ತುಗಳ ಬೆಲೆ ಕಡಿಮೆ ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆಗೆ ಗುಡ್ ನ್ಯೂಸ್ ನೀಡಿದ್ದರು. ಪ್ರಮುಖವಾಗಿ ಜಿಎಸ್‌ಟಿ ಕಡಿತದ ಕುರಿತು ಮಹತ್ವದ ಘೋಷಣೆ ಮಾಡಿದ್ದರು. ದೇಶದಲ್ಲಿ ಹೊಸ ಜಿಎಸ್‌ಟಿ ಸಿಸ್ಟಮ್ ಜಾರಿಗೆ ತರಲಾಗುತ್ತಿದೆ ಎಂದಿದ್ದರು. ಇಷ್ಟೇ ಅಲ್ಲ ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವುದಾಗಿ ಘೋಷಿಸಿದ್ದರು. ವಿಶೇಷ ಅಂದರೆ ಈ ಬದಲಾವಣೆಯಿಂದ ದೇಶದಲ್ಲಿ ಹಲವು ವಸ್ತುಗಳ ಮೇಲಿನ ಬೆಲೆ ಕಡಿತಗೊಳ್ಳಲಿದೆ. ಈ ಪೈಕಿ ದಿನಬಳಕೆ ವಸ್ತುಗಳ ಮೇಲಿನ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ. ಜಿಎಸ್‌ಟಿ ಎಷ್ಟು ಇಳಿಕೆಯಾಗಲಿದೆ ? ಸರಕು, ಅಗತ್ಯ […]

Continue Reading

ವಾಹನ ಮಾಲೀಕರಿಗೆ ಸೂಚನೆ: ಮೊಬೈಲ್ ನಂಬರ್ ಲಿಂಕ್ ಕಡ್ಡಾಯ, ಆನ್‌ಲೈನ್ ಪ್ರಕ್ರಿಯೆ ಹೇಗೆ ?

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಹತ್ವದ ಅಪ್‌ಡೇಟ್ ನೀಡಿದೆ. ವಾಹನ ಮಾಲೀಕರು ಮತ್ತು ಡ್ರೈವಿಂಗ್ ಲೈಸೆನ್ಸ್ ಹೋಲ್ಡರ್ ಮೊಬೈಲ್ ನಂಬರ್ ಅಪ್‌ಡೇಟ್ ಅಥವಾ ಲಿಂಕ್ ಮಾಡಿಕೊಳ್ಳಬೇಕು, ಇದು ಕಡ್ಡಾಯವಾಗಿದೆ. ದೇಶಾದ್ಯಂತ ಈ ಅಪ್‌ಡೇಟ್ ನಡೆಯಲಿದೆ. ಪಾರದರ್ಶಕತೆ, ಸಂವಹನ ಸೇರಿದಂತೆ ಇತರ ಹಲವು ತಾಂತ್ರಿಕ ಕಾರಣಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ. ಸಾರಿಗೆಯ ಹಲವು ಸೇವೆಗಳಿಗೆ ಮೊಬೈಲ್ ನಂಬರ್ ಲಿಂಕಿಂಗ್ ಮತ್ತು ಆಧಾರ್ ಅಥೆಂಟಿಕೇಶನ್ ಕಡ್ಡಾಯ ಮಾಡಲಾಗಿದೆ. ಲೈಸೆನ್ಸ್, […]

Continue Reading

1 ಗಂಟೆ 43 ನಿಮಿಷ PM ಮೋದಿ ಭಾಷಣ, ದಾಖಲೆ: ಅತಿ ಕಡಿಮೆ ಸಮಯ ಭಾಷಣ ಮಾಡಿದ PM ಯಾರು ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೆಂಪು ಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬರೋಬ್ಬರಿ 1 ಗಂಟೆ 43 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. ಈ ಮೂಲಕ ದೀರ್ಘ ಭಾಷಣ ಮಾಡಿದ ಪ್ರಧಾನಿ ಎನಿಸಿಕೊಂಡಿದ್ದಾರೆ. ಕಳೆದ ವರ್ಷ 98 ನಿಮಿಷಗಳ ಭಾಷಣ ಮಾಡಿ ದಾಖಲೆ ಬರೆದಿದ್ದ ಮೋದಿ, ಈ ಬಾರಿ 103 ನಿಮಿಷಗಳ ಕಾಲ ಮಾತನಾಡುವ ಮೂಲಕ ತಮ್ಮದೆ ದಾಖಲೆ ಮುರಿದಿದ್ದಾರೆ. 2024ರ ಮೊದಲು ಮೋದಿ ಅವರ ದೀರ್ಘ ಸ್ವಾತಂತ್ರ್ಯ ದಿನಾಚರಣೆಯ ಭಾಷಣ […]

Continue Reading

ರೇಣುಕಾಸ್ವಾಮಿ ಕೊಲೆ ಕೇಸ್: ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ಜಾಮೀನು ರದ್ದು

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ.

Continue Reading

UPI ಬಳಕೆಯಲ್ಲಿ ಇಂದಿನಿಂದ ಈ ಬದಲಾವಣೆಗಳು, ಎಚ್ಚರವಿರಲಿ

ನವದೆಹಲಿ: ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) 2025 ಆಗಸ್ಟ್ 1ರಿಂದ ಏಕೀಕೃತ ಪಾವತಿ ಇಂಟರ್ಫೇಸ್ (UPI)ಗಾಗಿ ಹಲವಾರು ಹೊಸ ನಿಯಮಗಳು ಪರಿಚಯಿಸಲಿದೆ. ಈ ಬದಲಾವಣೆಗಳು ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸುವದು, ಪ್ರತಿಕ್ರಿಯೆ ಸಮಯವನ್ನು ವೇಗಗೊಳಿಸುವುದು ಮತ್ತು ಡಿಜಿಟಲ್ ಪಾವತಿಗಳ ಉತ್ತಮ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿವೆ. ಈ ಬದಲಾವಣೆಗಳು ಯೂಸರ್‌ಗಳು ಮತ್ತು Google Pay, PhonePe ಮತ್ತು Paytm ನಂತಹ ಅಪ್ಲಿಕೇಶನ್‌ಗಳ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚುತ್ತಿರುವ UPI ಪಾವತಿಗಳನ್ನು ಸರಾಗವಾಗಿ ನಿರ್ವಹಿಸಲು ಬ್ಯಾಂಕುಗಳು ಮತ್ತು ಅಪ್ಲಿಕೇಶನ್‌ಗಳಿಗೆ […]

Continue Reading

ಭಾವನ ಜೊತೆ ಅಕ್ರಮ ಸಂಬಂಧ: ಕರೆಂಟ್‌ ಶಾಕ್‌ ಕೊಟ್ಟು ಗಂಡನ ಕೊಂದ ಹೆಂಡತಿ

ನವದೆಹಲಿ: ಆಕಸ್ಮಿಕ ಸಾವು ಎಂದು ನಂಬಲಾಗಿದ್ದ ದೆಹಲಿ ನಿವಾಸಿ ಕರಣ್‌ ದೇವ್‌ ಸಾವಿನ ಪ್ರಕರಣ ತಿರುವು ಪಡೆದುಕೊಂಡಿದ್ದು, ಪ್ರಿಯಕರ ಜೊತೆ ಸೇರಿ ಪತ್ನಿಗೆ ವಿದ್ಯುತ್‌ ಶಾಕ್‌ ಕೊಟ್ಟು ಕೊಂದಿದ್ದಾಳೆ ಎಂದು ತನಿಖೆಯಿಂದ ಬಯಲಾಗಿದೆ. ಜುಲೈ 13ರಂದು ಕರಣ್‌ ದೇವ್‌ ಅವರನ್ನು ಮಾತಾ ರೂಪಾರಾಣಿ ಮ್ಯಾಗೊ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪತ್ನಿ ಸುಶ್ಮಿತಾ, ವಿದ್ಯುತ್‌ ಆಕಸ್ಮಿಕವಾಗಿ ತಗುಲಿ ಬಿದ್ದಿದ್ದಾರೆ ಎಂದು ಹೇಳಿದ್ದಳು. ಪರೀಕ್ಷೆ ನಡೆಸಿದ ಆಸ್ಪತ್ರೆ ಸಿಬ್ಬಂದಿ ಕರಣ್‌ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಆಕಸ್ಮಿಕ ಸಾವು ಆಗಿದ್ದರಿಂದ ಮರಣೋತ್ತರ ಪರೀಕ್ಷೆ […]

Continue Reading

ಖಾಸಗಿ ವಾಹನಗಳಿಗೆ 3 ಸಾವಿರ ರೂ. ವಾರ್ಷಿಕ ಟೋಲ್‌ ಪಾಸ್ ಘೋಷಿಸಿದ ನಿತಿನ್ ಗಡ್ಕರಿ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಆಗಸ್ಟ್ 15, 2025 ರಿಂದ 3 ಸಾವಿರ ರೂ. ಬೆಲೆಯ ಹೊಸ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪ್ರಾರಂಭಿಸಲಾಗುವುದಾಗಿ ಘೋಷಣೆ ಹೊರಡಿಸಿದ್ದಾರೆ. ಇದು ವಾಣಿಜ್ಯೇತರ ವಾಹನಗಳಿಗೆ ದೇಶದ ಹೆದ್ದಾರಿ ಜಾಲದಾದ್ಯಂತ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುವ ಉದ್ದೇಶ ಹೊಂದಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವ ಗುರಿಯನ್ನು ಹೊಂದಿರುವ ಈ ಉಪಕ್ರಮವನ್ನು ಇಂದು (18) ಘೋಷಿಸಲಾಗಿದೆ. ತೊಂದರೆ ರಹಿತ ಹೆದ್ದಾರಿ ಪ್ರಯಾಣದತ್ತ ಪರಿವರ್ತಕ […]

Continue Reading

35 ವರ್ಷದ ಹಿಂದೆ ಅಪ್ಪ ಖರೀದಿಸಿದ್ದ ಷೇರು ಪತ್ರ ಪತ್ತೆ: ರಾತ್ರೋರಾತ್ರಿ ಶ್ರೀಮಂತನಾದ ಮಗ

ನವದೆಹಲಿ: ಮನುಷ್ಯನಿಗೆ ಜೀವನದಲ್ಲಿ ಅದೃಷ್ಟ ಹೇಗೆಲ್ಲಾ ಖುಲಾಯಿಸಬಹುದು ಎಂದು ಊಹಿಸುವುದು ಕಷ್ಟ. ಇದೀಗ ವೈರಲ್‌ ಆಗುತ್ತಿರುವ ಈ ಸುದ್ದಿ ಅದಕ್ಕೊಂದು ಸೇರ್ಪಡೆ. ಹೌದು ಇತ್ತೀಚೆಗೆ ವ್ಯಕ್ತಿಯೊಬ್ಬರಿಗೆ ತನ್ನ ತಂದೆ 1990ರಲ್ಲಿ ಒಂದು ಲಕ್ಷ ರೂ’ಗೆ ಖರೀದಿಸಿದ್ದ ಜೆಎಸ್‌’ಡಬ್ಲ್ಯು ಸ್ಟೀಲ್‌’ನ ಹಳೆಯ ಷೇರು ಪ್ರಮಾಣಪತ್ರ ಸಿಕ್ಕಿದೆ. ಮೂರು ದಶಕಗಳ ಬಳಿಕ ಈ ಷೇರುಗಳ ಬೆಲೆ ಈಗ ಅಂದಾಜು 80 ಕೋಟಿ ರೂ ಆಗಿದೆ. ಹೂಡಿಕೆದಾರ ಸೌರವ್‌ ದತ್ತಾ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ವಿಷಯವನ್ನು ಪೋಸ್ಟ್‌ ಮಾಡುವ […]

Continue Reading

ಪೊಲೀಸ್ ಕಚೇರಿಯಲ್ಲೆ 51 ಲಕ್ಷ ರೂ ನಗದು, ಆಭರಣ ಕದ್ದಿದ್ದ ಹೆಡ್‌ ಕಾನ್‌ಸ್ಟೆಬಲ್ ಬಂಧನ

ನವದೆಹಲಿ: ದೆಹಲಿ ಪೊಲೀಸ್‌ನ ಲೋಧಿ ರಸ್ತೆಯ ವಿಶೇಷ ಸೆಲ್‌ನ ಕಚೇರಿಯಲ್ಲಿರುವ ಸ್ಟೋರ್‌ ರೂಂ’ನಿಂದ ಸುಮಾರು 51 ಲಕ್ಷ ರೂ ನಗದು ಮತ್ತು ಆಭರಣಗಳನ್ನು ಕದ್ದ ಆರೋಪದ ಮೇಲೆ ದೆಹಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಒಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳ್ಳತನ, ದರೋಡೆ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಸ್ಟೋರ್‌ ರೂಂ’ನಲ್ಲಿ ಇರಿಸಲಾಗಿತ್ತು. ಅಲ್ಲಿಗೆ ಕಾನ್‌ಸ್ಟೆಬಲ್ ಪ್ರವೇಶವಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ ಸ್ಟೋರ್‌ ರೂಮ್‌ಗೆ ಪ್ರವೇಶಿಸಿದ್ದ ಕಾನ್‌ಸ್ಟೆಬಲ್, ನಗದು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ […]

Continue Reading

ಭಯೋತ್ಪಾದನೆಯ ವಿರುದ್ಧ ಯುದ್ಧ ಸಾರಿದ ಭಾರತ

ನವದೆಹಲಿ: ಭಯೋತ್ಪಾದನೆ ವಿರುದ್ಧ ಭಾರತ ಸಮರ ಸಾರಿದೆ. ಯಾವುದೆ ಭಯೋತ್ಪಾದನೆಯನ್ನು ಭಾರತ ಯುದ್ಧ ಎಂದೆ ಪರಿಗಣಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಸರಣಿ ಸಭೆ ನಡೆಸಿದ ಮೋದಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಭಯೋತ್ಪಾದಕರನ್ನು ಛೂ ಬಿಡುತ್ತಿದ್ದ ಪಾಕಿಸ್ತಾನಕ್ಕೆ ಕಟು ಸಂದೇಶವನ್ನು ಮೋದಿ ರವಾನಿಸಿದ್ದಾರೆ. ಪಾಕಿಸ್ತಾನಲ್ಲಿ ಮಿಲಿಟರಿ ಸೈನಿಕರ ಸಂಖ್ಯೆ ಕಡಿಮೆಯಿದ್ದು ಉಗ್ರರ ಬಳಸಿಕೊಂಡು ಪ್ರತಿದಾಳಿ ನಡೆಸುತ್ತದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೆ ಈ ಮಹತ್ವದ ನಿರ್ಧಾರ ಪ್ರಕಟವಾಗಿದೆ.

Continue Reading