ದಸಂಸ: ತಾಲೂಕು ಸಂಚಾಲಕರಾಗಿ ಸುಭಾಷ ಸಾಕ್ರೆ ನೇಮಕ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಶಹಾಬಾದ ತಾಲೂಕು ಸಂಚಾಲಕರಾಗಿ ಸುಭಾಷ ಸಾಕ್ರೆ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಸಂ. ಸಂಚಾಲಕ ಸತೀಶ ಕೋಬಾಳಕರ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕದಸಂಸ (ಅಂಬೇಡ್ಕರವಾದ) ತಾಲೂಕು ಸಮಿತಿ ಬಲಗೊಳಿಸುವ ನಿಟ್ಟಿನಲ್ಲಿ ಪದಾದಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದರು.

ತಾಲೂಕು ಸಂಘಟನಾ ಸಂಚಾಲಕರಾಗಿ ಮನೋಹರ ಕೋಳೂರ, ಶಿವಶಾಲ ಪಟ್ಟಣಕರ್, ಹುಲಿಗೇಶ ನಾಟೇಕರ, ರಾಣೋಜಿ ಹಾದಿಮನಿ ಶಂಕರವಾಡಿ, ನಾಗರಾಜ ಕರದಳ್ಳಿ ಅಲ್ಲಿದಾಳ, ತುಳಜಾರಾಮ ಬೋಯಿ, ಮಲ್ಲಪ್ಪ ನಡುವಿನಕೇರಿ ಮತ್ತು ಖಾಜಾಂಚಿಯಾಗಿ ಅಮರನಾಥ ಮರತೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಸತೀಶ ಕೋಬಾಳಕರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *