ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಕ್ರಾಂತಿಗೆ ಕಾರಣವಾದ ಯುಪಿಐ ನಿಯಮದಲ್ಲಿ ಸರ್ಕಾರ ಕೆಲ ಬದಲಾವಣೆ ಮಾಡಿದ್ದು, ಸೆ.15ರಿಂದ ಈ ಬದಲಾವಣೆ ಜಾರಿಗೆ ಬಂದಿದೆ.
ಬದಲಾವಣೆ ಅನ್ವಯ ಸಾಲ, ಇಎಂಐ, ಬಂಡವಾಳ ಮಾರುಕಟ್ಟೆ ಹೂಡಿಕೆ, ವಿಮಾ ಕಂತುಗಳ ಪಾವತಿಯ ದೈನಂದಿನ ಮಿತಿಯನ್ನು ದಿನಕ್ಕೆ 10 ಲಕ್ಷ ರೂ.ಗೆ ಏರಿಸಲಾಗಿದೆ.
ಒಂದು ಬಾರಿಗೆ 5 ಲಕ್ಷ ರೂ. ಮೊತ್ತದ ವಹಿವಾಟು ನಡೆಸಬಹುದು. ಉಳಿದಂತೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯನ್ನು ಒಂದು ಬಾರಿಗೆ 5 ಲಕ್ಷ ರೂ.ನಂತೆ ದಿನಕ್ಕೆ ಗರಿಷ್ಠ 6 ಲಕ್ಷ ರೂ. ನಿಗದಿಪಡಿಸಲಾಗಿದೆ. ವ್ಯಾಪಾರಿಗಳಿಗೆ ಒಮ್ಮೆಗೆ 10 ಲಕ್ಷ ರೂ.ವರೆಗೆ ಪಾವತಿಸಬಹುದು. ಆದರೆ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಕಳಿಸಬಹುದಾದ ಮೊತ್ತದ ಮಿತಿಯಲ್ಲಿ ಯಾವುದೆ ಬದಲಾವಣೆಯಾಗದೆ ಮೊದಲಿನಂತೆ ದಿನಕ್ಕೆ 1 ಲಕ್ಷ ರೂ ಮುಂದುವರೆಯಲಿದೆ.
ಉಪಯೋಗವೇನು ?
ಈ ಬದಲಾವಣೆಯಿಂದ ವಿಮೆ ಪಾವತಿ ಹಿಡಿದು ಹೂಡಿಕೆ ವರೆಗೆ ಎಲ್ಲಾ ವ್ಯವಹಾರಗಳಿಗೆ ನೆಟ್ಬ್ಯಾಂಕಿಂಗ್ ಬದಲು ಯುಪಿಐ ಬಳಸಬಹುದು. ಹೀಗೆ ಮಾಡುವಾಗ ದೊಡ್ಡ ಮೊತ್ತವನ್ನು ಸಣ್ಣಸಣ್ಣ ಕಂತುಗಳಲ್ಲಿ ಪಾವತಿಸುವ ಬದಲು, ಒಮ್ಮೆಲೆ 5ರಿಂದ 10 ಲಕ್ಷ ರೂ. ವರೆಗಿನ ವ್ಯವಹಾರ ಮಾಡಬಹುದು. ಜತೆಗೆ ಯುಪಿಐ ಬಳಕೆ ವ್ಯಾಪಕವಾಗಿ ಹೆಚ್ಚಿಸಲಿದೆ.
ಮೊಬೈಲ್ ಕಳೆದು ಹೋದಾಗ Google Pay, Paytm, PhonePe ಬ್ಲಾಕ್ ಮಾಡುವದು ಹೇಗೆ ?
ಮೊಬೈಲ್ ಕಳೆದುಹೋದಾಗ ಆನ್ಲೈನ್ ವ್ಯಾಲೆಟ್ಗಳನ್ನು ಸುರಕ್ಷಿತವಾಗಿ ಲಾಕ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. Google Pay, PhonePe ಮತ್ತು Paytm ನಂತಹ ಆಪ್ಗಳನ್ನು ತಕ್ಷಣ ನಿಷ್ಕ್ರಿಯಗೊಳಿಸುವ ವಿಧಾನ ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸಂಪರ್ಕ ಸಾಧನ ಮಾತ್ರವಲ್ಲದೆ, ನಮ್ಮ ಜೇಬಿನಲ್ಲಿ ಲಕ್ಷಾಂತರ ರೂ ಇರುವಷ್ಟು ಧೈರ್ಯ ನೀಡುವ ಒಂದು ಪಾವತಿ ಸಾಧನವಾಗಿದೆ.
ಆದರೆ ಮೊಬೈಲ್ ಕಳೆದುಹೋದಾಗ ನಮ್ಮ ಹಣಕ್ಕೆ ಕನ್ನ ಬೀಳುವ ಭಯ ಕಾಡುತ್ತದೆ. ಹಾಗಿದ್ದರೆ, ನಿಮ್ಮ ಮೊಬೈಲ್ ಕಳೆದು ಹೋದಾಗ ಅದರಲ್ಲಿರುವ ಪ್ರಮುಖ ಆನ್ಲೈನ್ ವ್ಯಾಲೆಟ್ಗಳನ್ನು ಸುರಕ್ಷಿತವಾಗಿ ಬ್ಲಾಕ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಮೊಬೈಲ್ ಇಲ್ಲದೆ ಶಾಪಿಂಗ್ ಮಾಡುವುದು ಈಗ ಅಸಾಧ್ಯ. ಯಾಕೆಂದರೆ ದಿನಸಿ ಸಾಮಾನುಗಳಿಂದ ಹಿಡಿದು ಬಟ್ಟೆಗಳವರೆಗೆ ಎಲ್ಲದಕ್ಕೂ ನಗದು ಅಥವಾ ಕಾರ್ಡ್ಗಳ ಬದಲಿಗೆ Google Pay, PhonePe ಮತ್ತು Paytm ನಂತಹ ಆಪ್ಗಳನ್ನು ಬಳಸಿ UPI ಪಾವತಿ ಮಾಡುತ್ತೆವೆ.
ಇದು ಸುರಕ್ಷಿತ ಮತ್ತು ಸರಳವಾದ ಮಾರ್ಗವಾದರೂ, ಮೊಬೈಲ್ ಕಳ್ಳರ ಕೈಗೆ ಸಿಕ್ಕರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು. ಆದರೆ ಚಿಂತಿಸಬೇಡಿ. ನಿಮ್ಮ ಮೊಬೈಲ್ ಕಳೆದುಹೋದರೂ ಆಪ್ಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸಬಹುದು.
Google Pay ಖಾತೆ ನಿಷ್ಕ್ರಿಯಗೊಳಿಸಲು
ಮೊದಲು Google Pay ಗ್ರಾಹಕರ ಸಹಾಯವಾಣಿ ಸಂಖ್ಯೆ 18004190157 ಗೆ ಕರೆ ಮಾಡಿ. ನಿಮ್ಮ ಭಾಷೆ ಆಯ್ಕೆ ಮಾಡಿ. ಅಲ್ಲಿ ಕೇಳುವ ಆಯ್ಕೆಗಳಲ್ಲಿ ಇತರೆ ಸಮಸ್ಯೆಗಳು ಆಯ್ಕೆ ಮಾಡಿ.
ನಂತರ ಪರಿಣಿತರ ಜೊತೆಗೆ ಮಾತನಾಡಲು ಆಯ್ಕೆ ಮಾಡಿದರೆ, ಅವರು ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲು ಸಹಾಯ ಮಾಡುತ್ತಾರೆ.
PhonePe ಖಾತೆ ನಿಷ್ಕ್ರಿಯಗೊಳಿಸಲು
PhonePe ಬಳಕೆದಾರರು 08068727374 ಅಥವಾ 02268727374 ಸಂಖ್ಯೆಗೆ ಕರೆ ಮಾಡಿ. ಭಾಷೆ ಆಯ್ಕೆ ಮಾಡಿದ ನಂತರ PhonePe ಖಾತೆಗೆ ಸಂಬಂಧಿಸಿದ ಸಮಸ್ಯೆಯನ್ನು ದಾಖಲಿಸಲು ಬಯಸುವಿರಾ ? ಎಂದು ಕೇಳಿದಾಗ ‘ಹೌದು’ ಎಂಬ ಬಟನ್ ಒತ್ತಿ.
ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ. ನಿಮಗೆ OTP ಸಿಗಲಿಲ್ಲವಾದಲ್ಲಿ, OTP ಲಭಿಸಲಿಲ್ಲ ಎಂಬುದು ಆಯ್ಕೆ ಬಟನ್ ಒತ್ತಿ.
ನಿಮ್ಮ ಸಿಮ್ ಅಥವಾ ಮೊಬೈಲ್ ಕಳೆದುಹೋಗಿರುವ ಬಗ್ಗೆ ದೂರು ನೀಡಲು ಅವಕಾಶ ಸಿಗುತ್ತದೆ. ಆ ಆಯ್ಕೆ ಆಯ್ದುಕೊಂಡರೆ ನಿಮ್ಮ ಕರೆಯನ್ನು ತಂತ್ರಜ್ಞರಿಗೆ ವರ್ಗಾಯಿಸಲಾಗುತ್ತದೆ.
ಅವರು ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲು ನೆರವು ನೀಡುತ್ತಾರೆ. ಆದರೆ ಇದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಇತ್ತೀಚಿನ ವಹಿವಾಟುಗಳ ವಿವರ ನೀಡಬೇಕಾಗುತ್ತದೆ.