9 ಲಕ್ಷ ರೂ. ಗರಿಗರಿ ನೋಟುಗಳಿಂದ ಧನಲಕ್ಷ್ಮಿಯಾಗಿ ಕಂಗೊಳಿಸಿದ ಕನ್ನಿಕಾ ಪರಮೇಶ್ವರಿ ದೇವಿ

ಜಿಲ್ಲೆಯ

ಸುದ್ದಿ ಸಂಗ್ರಹ ದಾವಣಗೆರೆ
ವಿಜಯದಶಮಿ ಹಬ್ಬದ ಸಲುವಾಗಿ ದಾವಣಗೆರೆ ನಗರದ ಪ್ರಸಿದ್ಧ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ದೇವಿಗೆ 9 ಲಕ್ಷ ರೂ. ಮೌಲ್ಯದ ಗರಿಗರಿ ನೋಟುಗಳಿಂದ ಅಲಂಕಾರ ಮಾಡಲಾಗಿದೆ.

10 ರೂ. ನೋಟುಗಳಿಂದ ಹಿಡಿದು 500 ರೂ. ಮುಖಬೆಲೆಯ ನೋಟುಗಳನ್ನು ಬಳಸಿ ದೇವಸ್ಥಾನದ ತೋರಣ, ಕಂಬಗಳು ಸೇರಿದಂತೆ ಇಡಿ ಗರ್ಭಗುಡಿಯನ್ನು ಮನಮೋಹಕವಾಗಿ ಕಂಗೊಳಿಸುವಂತೆ ಅಲಂಕರಿಸಲಾಗಿದೆ. ವಿಜಯದಶಮಿಯ ಪವಿತ್ರ ದಿನದಂದು ಕನ್ನಿಕಾ ಪರಮೇಶ್ವರಿಯ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ವಿಶೇಷವಾಗಿ ವೈಕುಂಠ ದ್ವಾರಗಳ ಮೂಲಕ ಪ್ರವೇಶ ಕಲ್ಪಿಸಲಾಗಿತ್ತು.

ಭಕ್ತರು ಏಳು ದ್ವಾರಗಳನ್ನು ದಾಟಿ ದೇವಿಯ ದರ್ಶನ ಪಡೆದಿದ್ದಾರೆ. ನವರಾತ್ರಿ ಆರಂಭವಾದಾಗಿನಿಂದ ಪ್ರತಿದಿನ ದೇವಿಗೆ ವಿವಿಧ ರೂಪದ ಅಲಂಕಾರಗಳನ್ನು ಮಾಡಲಾಗುತ್ತಿತ್ತು. ವಿಜಯದಶಮಿಯಂದು ಧನಲಕ್ಷ್ಮಿ ಅಲಂಕಾರ ಮಾಡಲಾಗಿದೆ.

ಮುಂಬರುವ ದೀಪಾವಳಿ ಹಬ್ಬದವರೆಗೂ ದಿನಕ್ಕೊಂದು ವಿಶೇಷ ಅಲಂಕಾರದೊಂದಿಗೆ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ದೇವಸ್ಥಾನದ ಟ್ರಸ್ಟಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *