ಕಾಳಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಕಾಂಗ್ರೆಸ್‌ ಜಯಭೇರಿ

ಪಟ್ಟಣ

ಸುದ್ದಿ ಸಂಗ್ರಹ ಕಾಳಗಿ
ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿತು. ಬೀದರ್‌ ಸಂಸದ ಸಾಗರ್‌ ಖಂಡ್ರೆ ಮತದ ಬಲದಿಂದ ಗೆಲುವಿನ ನಗೆ ಬೀರಿತು.‌

ಅಧ್ಯಕ್ಷರಾಗಿ ಸಾಲಿಯಾಬೇಗಂ ಬಿಜಾಪುರ ಮತ್ತು ಉಪಾಧ್ಯಕ್ಷರಾಗಿ ಶರಣಪ್ಪ ಬೇಲೂರ ತಲಾ ಏಳು ಮತಗಳನ್ನು ಪಡೆದು ಆಯ್ಕೆಯಾದರು.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ರಮೇಶ ಚಂದ್ರಕಾಂತ ಕಿಟ್ಟದ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಜಿತೇಂದ್ರ ನೂರಸಿಂಗ್ ರಾಠೋಡ ತಲಾ 6 ಮತಗಳು ಪಡೆದು ಪರಾಭವಗೊಂಡರು.

ಸಂಸದ ಖಂಡ್ರೆ ಅವರಂತೆಯೇ ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಅವರು ಬಂದು ಮತ ಚಲಾಯಿಸಿದರೂ ಕಮಲ ಅರಳಲಿಲ್ಲ.

ವಿಜಯೋತ್ಸವ: ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಕುಣಿದು ಕುಪ್ಪಳಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

Leave a Reply

Your email address will not be published. Required fields are marked *