ಕಲಬುರಗಿ: ಯುವಕನ ರುಂಡ-ಮುಂಡ ಬೇರ್ಪಟ್ಟಿದ್ದ ನಿಗೂಢ ಕೇಸ್ ಭೇದಿಸಿದ ಪೊಲೀಸರು

ಜಿಲ್ಲೆಯ

ಸುದ್ದಿ ಸಂಗ್ರಹ ಕಲಬುರಗಿ
ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬರು (ಬಿ) ಗ್ರಾಮದ ಜಮೀನಿನಲ್ಲಿ ರುಂಡ-ಮುಂಡ ಬೇರೆಯಾಗಿದ್ದ ಯುವಕನ ಶವವೊಂದು ಪತ್ತೆಯಾಗಿತ್ತು. ನಿಗೂಢ ಪ್ರಕರಣವನ್ನು ಬೆನ್ನಟ್ಟಿದ ಗಾಣಗಾಪುರ ಪೊಲೀಸರು ಕೇವಲ 48 ಗಂಟೆಗಳಲ್ಲಿ ಭೇದಿಸಿದ್ದಾರೆ. ಅಪಘಾತವೋ ಅಥವಾ ಕೊಲೆಯೋ ಎಂಬ ಗೊಂದಲ ಮೂಡಿಸಿದ್ದ ಈ ಕೇಸ್​, ಹಣಕಾಸಿನ ವಿಚಾರಕ್ಕೆ ಬರ್ಬರ ಹತ್ಯೆ ನಡೆದಿದೆ ಎಂಬುದು ಇದೀಗ ಬಯಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು ?
ಸೆಪ್ಟೆಂಬರ್ 25ರಂದು ಕಲಬುರಗಿ ಜಿಲ್ಲೆ‌ಯ ಅಫಜಲಪುರ ತಾಲೂಕಿನ ಗೊಬ್ಬರು (ಬಿ) ಗ್ರಾಮದ ಜಮೀನಿನಲ್ಲಿ ಓರ್ವ ಯುವಕನ ಶವ ಸಿಕ್ಕಿತ್ತು.‌ ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಗಾಣಗಾಪುರ ಪೊಲೀಸರು ರುಂಡ-ಮುಂಡ ಬೇರೆ ಬೇರೆ ಆಗಿ ಬಿದ್ದಿದ್ದ ಯುವಕನ ಶವ ನೋಡಿ ಹೌಹಾರಿದ್ದರು.‌ ಏಕೆಂದರೆ ರಾಜ್ಯ ಹೆದ್ದಾರಿ ಪಕ್ಕದ ಜಮೀನಿನಲ್ಲೇ ಶವ ಬಿದ್ದಿತ್ತು.‌ ಹೆಚ್ಚು ಕಡಿಮೆ ಡಿಕಂಪೋಸ್​​ ಆಗಿತ್ತು.‌

ಜಮೀನಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿತ್ತು ಶವ
ಗ್ರಾಮದಲ್ಲಿ ಯಾರಾದರೂ ನಾಪತ್ತೆ ಆಗಿದ್ದಾರಾ ಎಂದು ಪೊಲೀಸರು ವಿಚಾರಿಸಿದ್ದಾರೆ. ಆಗ ಗೊಬ್ಬರು ಗ್ರಾಮದ 22 ವರ್ಷದ ಖಲೀಂ ಸಾಬ್ ನಾಪತ್ತೆಯಾಗಿದ್ದ‌ ಎಂಬ ಮಾಹಿತಿ ಸಿಕ್ಕಿತ್ತು.‌ ತಕ್ಷಣ ಕುಟುಂಬಸ್ಥರನ್ನ ಸ್ಥಳಕ್ಕೆ‌ ಕರೆಸಿದ ಪೊಲೀಸರಿಗೆ ಮತ್ತೊಂದು ಶಾಕಕ್ ಕಾದಿತ್ತು. ಅದೇನೆಂದರೆ ಅಲ್ಲಿ ಶವವಾಗಿ ಬಿದ್ದಿದ್ದು ಖಲೀಂ ಸಾಬ್​​ ಎನ್ನುವುದು ಗೊತ್ತಾಗಿದೆ. ಅಲ್ಲಿಗೆ ಶವದ ಗುರುತು ಪತ್ತೆಯಾಗಿತ್ತು.‌ ಆದರೆ ಅದು ಕೊಲೆನಾ ಅಥವಾ ಅಪಘಾತದಿಂದ ರಸ್ತೆ ಮೇಲೆ ಬಿದ್ದಿದ್ದ ಶವವನ್ನ‌ ಪ್ರಾಣಿಗಳು ಎಳೆದು ತಂದಿದ್ದ ಒಂದು ಗೊತ್ತಾಗಿರಲ್ಲ.‌ ಈ ಮಧ್ಯೆ ಶವ ಡಿಕಂಪೋಸ್​​ ಆಗಿರುವುದರಿಂದ ಪೊಲೀಸರು ಕೂಡ ಫುಲ್‌ ಗೊಂದಲ ಆಗಿದ್ದರು.‌

ಇತ್ತ ಖಲೀಂ‌ ಸಾಬ್‌ ಮನೆಯವರು ಕೊಲೆ‌ ಕೇಸ್ ದಾಖಲಿಸಿದ್ದರು.‌ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಸದ್ಯ ಸ್ಫೋಟಕ ವಿಚಾರ ಗೊತ್ತಾಗಿದೆ.‌ ಅದು ಅಪಘಾತ ಅಲ್ಲ, ಅದೊಂದು ಬರ್ಬರ ಹತ್ಯೆ ಎನ್ನುವುದು ಬಯಲಾಗಿದೆ. ಹಣದ ವಿಚಾರವಾಗಿ ನಂದಿಕೂರ ತಾಂಡಾದ ಸಂದೀಪ್‌ ಪವಾರ್ ಮತ್ತು ಸಂದೀಪ್‌ ಚವ್ಹಾಣ್ ಕೊಲೆ‌ ಮಾಡಿ ಯಾವುದೆ ಸುಳಿವು ನೀಡದೆ ಪರಾರಿ ಆಗಿದ್ದರು ಎನ್ನುವುದು ಗೊತ್ತಾಗಿದೆ.‌ ಸದ್ಯ ಪೊಲೀಸರು ಇಬ್ಬರನ್ನ ಬಂಧಿ‌ಸಿ ನ್ಯಾಯಂಗ ಬಂಧನಕ್ಕೊಪ್ಪಿಸಿದ್ದಾರೆ.

ಪೆಟ್ರೋಲ್ ತಂದುಕೊಟ್ಟ ಹಣಕ್ಕಾಗಿ ಜಗಳ: ಹತ್ಯೆ
ಬಂಧಿತರ ವಿಚಾರಣೆ ನಡೆಸಿರುವ ಪೊಲೀಸರಿಗೆ ಅದೊಂದು ಹಣಕಾಸಿನ ವಿಚಾರಕ್ಕೆ ನಡೆದ ಕೊಲೆ ಎನ್ನುವುದು ಗೊತ್ತಾಗಿದೆ. ಸೆಪ್ಟೆಂಬರ್​ 25ರಂದು ಆರೋಪಿಗಳು ತಮ್ಮೂರಿನಿಂದ ಗಾಣಗಾಪುರಕ್ಕೆ ಹೋಗಿ ವಾಪಸ್ ಬರುವಾಗ ಬೈಕ್ ಪೆಟ್ರೋಲ್ ಖಾಲಿಯಾಗಿದ್ದು ತಳ್ಳಿಕೊಂಡು ಬರುತ್ತಿದ್ದರು. ಆಗ ಈ ಖಲೀಂ ಸಾಬ್ ಎದುರಾಗಿದ್ದಾನೆ. ಈ ವೇಳೆ ತಳ್ಳಿಕೊಂಡು ಬರುತ್ತಿದ್ದವರನ್ನ ಮಾತನಾಡಿಸಿದ್ದಾನೆ. ಅವಾಗ ಪೆಟ್ರೋಲ್ ತಂದು ಕೊಡುತ್ತೆನೆ ನನಗೆ ಹಣ ಕೊಡಬೇಕು ಎಂದಿದ್ದನಂತೆ. ಅದರಂತೆ ಪೆಟ್ರೋಲ್ ತಂದು ಕೊಟ್ಟಿದ್ದು, ಆರೋಪಿಗಳು 200 ರೂ ನೀಡಿದ್ದಾರೆ. ಆದರೆ ಇದು ಸಾಕಗಲ್ಲ ಇನ್ನು ಬೇಕು ಎಂದು ಪೀಡಿಸಿದ್ದನಂತೆ.

48 ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ಈ ವೇಳೆ ಖಲೀಂ ಮತ್ತು ಹಂತಕರ ಮಧ್ಯೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಖಲೀಂನ ಕೊಲೆ ಮಾಡಿದ್ದಾರೆ. ಅಲ್ಲದೆ ಡೆಡ್​ ಬಾಡಿಯನ್ನ ತೊಗರಿ ಬೆಳೆದ ಜಮೀನನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಎಸೆದು ಪರಾರಿಯಾಗಿದ್ದಾರೆ. ಹೀಗಾಗಿ ಯಾರಿಗೂ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಅಲ್ಲದೆ ಖಲೀಂ ಮೊಬೈಲ್ ಬಳಕೆ ಮಾಡದಿರುವುದರಿಂದ ಕೇಸ್ ಪತ್ತೆ ಹಚ್ಚುವುದು ಬಹಳ ಸವಾಲಿನ ಕೆಲಸವಾಗಿತ್ತು. ಆದರೂ ಸ್ಥಳೀಯರು ನೀಡಿದ ಸುಳಿವಿನ ಮೇರೆಗೆ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Leave a Reply

Your email address will not be published. Required fields are marked *