ಕೋನಸಿರಸಗಿ ಗ್ರಾಮದೇವತೆ ಆಭರಣ ಕಳ್ಳತನ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಯಡ್ರಾಮಿ
ತಾಲೂಕಿನ ಕೋನಸಿರಸಗಿಯ ಗ್ರಾಮ ದೇವತೆ ದೇವಸ್ಥಾನದಲ್ಲಿ ದೇವಿಯ ಟಿಕ್ಕೆ, ಮಾಂಗಲ್ಯ ಸರ, ಮೂಗಿನ ನತ್ತು ಸೇರಿ ಮೂರು ತೊಲೆ ಬಂಗಾರದ ಆಭರಣ ಶುಕ್ರವಾರ ರಾತ್ರಿ ಕಳ್ಳತನವಾಗಿದೆ.

ದೇವಸ್ಥಾನದ ಅರ್ಚಕ ಬಸ್ಸು ವಿಶ್ವಕರ್ಮ ಅವರು ಶನಿವಾರ ಬೆಳಿಗ್ಗೆ ಗ್ರಾಮಸ್ಥರಿಗೆ ವಿಷಯ ತಿಳಿಸಿದ ಬಳಿಕ ಕಳ್ಳತನವಾಗಿರುವುದು ಗೊತ್ತಾಗಿದೆ.

ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗುವುದು ಎಂದು ಗ್ರಾಮದ ಚಂದ್ರು ಬಿರಾದಾರ, ಚಂದ್ರಕಾಂತ ತಳವಾರ, ಅಯ್ಯನಗೌಡ ಪೊಲೀಸ್ ಪಾಟೀಲ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *