ಸುದ್ದಿ ಸಂಗ್ರಹ ಚಿತ್ತಾಪುರ
ಕಳೆದ ಒಂದು ತಿಂಗಳಿಂದ ಮತಕ್ಷೇತ್ರ ವ್ಯಾಪ್ತಿಯ 257 ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆದಿರುವ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಜು.31ರ ವರೆಗೆ 2,51,226 ಮತದಾರರ ಪೈಕಿ 1,93,767 ಮತದಾರರ ಮಾಹಿತಿ ಡಿಜಿಟಲೈಸ್ ಮಾಡಿದ್ದು ಒಟ್ಟು 49,044 ಮತದಾರರ ಹೆಸರು ಕರಡು ಮತದಾರ ಪಟ್ಟಿಯಿಂದ ಹೊರಗುಳಿಯಲಿವೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 95 ಮತಗಟ್ಟೆಗಳಲ್ಲಿ ಶೇ. 100ರಷ್ಟು ಸಾಧನೆಯಾಗಿದೆ. ಆ.1ರಿಂದ 5ರವರೆಗೆ ವಾರ್ಡ್‌ವಾರು ಗ್ರಾಮ ಸಭೆ ನಡೆಸಲು ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ.
ಮತದಾರ ಹೆಸರು ಕೈಬಿಡುವ ಕಾರಣದ ಕುರಿತು ವಿವರ ನೀಡಲಾಗುವುದು. ಯಾವುದೆ ಆಕ್ಷೇಪಣೆ ಬಾರದಿದ್ದರೆ ಹೆಸರು ಕೈಬಿಡಲಾಗುವುದು. ಆಕ್ಷೇಪಣೆ ಸಲ್ಲಿಸುವವರ ಅರ್ಜಿಯ ವಿಚಾರಣೆ ಮಾಡಿ ಸರಿಯಿದ್ದರೆ ಹೆಸರು ಸೇರ್ಪಡೆಗೆ ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಚಿತ್ತಾಪುರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ (ಇಆರ್‌ಒ) ರಾಜಕುಮಾರ ರಾಠೋಡ್ ಇದ್ದರು.