ವಾಡಿ: ಬಿಜೆಪಿ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ಸಂಭ್ರಮ

ಪಟ್ಟಣದ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಧ್ವಜಾರೋಹಣ ನೇರವೇರಿಸಿ ಮಾತನಾಡಿ ಅವರು, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ, 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಪ್ರತಿಯೊಬ್ಬರು ಸಂಕಲ್ಪ ತೊಡುವ ಸಂದರ್ಭ ಇದಾಗಿದೆ. ಈ ಒಂದು ಸಂಕಲ್ಪದೊಂದಿಗೆ 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕಾಗಿದೆ ಎಂದರು.

ಬಿಜೆಪಿ ಹಿರಿಯ ಮುಖಂಡ ಬಸವರಾಜ ಪಂಚಾಳ ಮಾತನಾಡಿ,
ಭಾರತದ ಸ್ವಾತಂತ್ರ್ಯ ಹೋರಾಟಗಾರರ ಜೀವನ ಅತ್ಯಂತ ಶ್ರೇಷ್ಠ ಹಾಗೂ ಆದರ್ಶಮಯವಾಗಿದೆ ಎಂದರು.

ದೇಶದ ವಿಮೋಚನೆಗಾಗಿ ತಮ್ಮ ವೈಯಕ್ತಿಕ ಸುಖ, ಸಂತೋಷ ಮತ್ತು ಪ್ರಾಣವನ್ನೇ ತ್ಯಾಗ ಮಾಡಿದ ಮಹನೀಯರ ಬದುಕು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ. ಇವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸುವುದೆ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.

ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜೀರೊಳ್ಳಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಾಣುವ ಮತ್ತು ಜಗತ್ತನೆ ಪೂಜ್ಯನೀಯ ಭಾವನೆಯಿಂದ ಕಾಣುವ ಶಾಂತಿ, ಸೌಹಾರ್ದತೆಗೆ ಹೆಸರಾದ ಸರ್ವಶ್ರೇಷ್ಠ ದೇಶ ನಮ್ಮದು ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಭಗವತ ಸುಳೆ, ಗಿರಿಮಲ್ಲಪ್ಪ ಕಟ್ಟಿಮನಿ, ಭೀಮರಾವ ದೊರೆ, ಅರ್ಜುನ ಕಾಳೆಕರ, ಶಿವ ನಾಯಕ, ಹರಿ ಗಲಾಂಡೆ, ಅಶೋಕ ಪವಾರ, ರಿಚರ್ಡ್ ಮಾರೆಡ್ಡಿ, ರಾಮುಶೇಠ ರಾಠೋಡ, ರಾಜೇಶ ಅಗ್ರವಾಲ, ಹಣಮಂತ ಚವ್ಹಾಣ, ಕಿಶನ ಜಾಧವ, ಅಂಬದಾಸ ಜಾಧವ, ಶಿವಶಂಕರ ಕಾಶೆಟ್ಟಿ, ಮಲ್ಲಿಕಾರ್ಜುನ ಸಾತಖೇಡ, ಕಾಳಪ್ಪ ಬಿಕೆ, ಕಾಶಿನಾಥ ಶೆಟಗಾರ,
ಅಯ್ಯಣ್ಣ ದಂಡೋತಿ, ರವಿ ಜಾಧವ, ಸತೀಶ ಸಾವಳಗಿ, ಆನಂದ ಇಂಗಳಗಿ, ವಿಶ್ವರಾಧ್ಯ ತಳವಾರ, ಪ್ರೇಮ ರಾಠೋಡ, ಸಂಜಯ ರಾಠೋಡ, ಭರತ ರಾಠೋಡ, ಜಯಂತ ಪವಾರ, ಪ್ರಕಾಶ ದಂಡೋತಿ, ಯಂಕಮ್ಮ ಗೌಡಗಾಂವ, ನಿರ್ಮಲಾ ಇಂಡಿ, ಉಮಾಭಾಯಿ ಗೌಳಿ, ಶರಣಮ್ಮ ಯಾದಗಿರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *