ವಾಡಿ: ಬಿಜೆಪಿ ಮುಖಂಡರಿಂದ ಕಾಮಗಾರಿ ವೀಕ್ಷಣೆ

ಪಟ್ಟಣದ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಪುರಸಭೆಯ 15ನೇ ಹಣಕಾಸಿನ ಯೋಜನೆಯ ಅನುದಾನದಲ್ಲಿ ವಾರ್ಡ್‌ ಸಂಖ್ಯೆ 2ರ ಚರಂಡಿ ಕಾಮಗಾರಿಯನ್ನು ಬಿಜೆಪಿ ಮುಖಂಡರು ಪರಿಶೀಲಿಸಿದರು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಕಾಮಗಾರಿ ಬಗ್ಗೆ ಮಾತನಾಡಿ, ಪುರಸಭೆಗೆ ಕಳೆದ ಮೂರೂವರೆ ವರ್ಷಗಳಿಂದ ಚುನಾವಣೆ ನಡೆಯದ ಕಾರಣ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿ ಅನುದಾನ ವಾಪಸ್ ಹೋಗತ್ತಿದೆ. 24 ರಿಂದ 26ರ ವರೆಗೆ 4.58 ಕೋಟಿ ಅಭಿವೃದ್ಧಿ ಹಣ ಕೈತಪ್ಪಿದ ಮಾಹಿತಿ ಬಂದಿದೆ ಎಂದರು.

ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ವಾಡಿ ಪಟ್ಟಣದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಶುದ್ಧ ಕುಡಿಯುವ ನೀರು, ಶೌಚಾಲಯ, ಚರಂಡಿ, ರಸ್ತೆಗಳಂತಹ ಅವಶ್ಯಕ ಸೌಕರ್ಯಗಳಿಗಾಗಿ ಜನ ಪರಿತಪಿಸುತ್ತಿದ್ದಾರೆ ಎಂದರು.

ಅಲ್ಪಸ್ವಲ್ಪ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಯಾದರು ಗುಣಮಟ್ಟದಲ್ಲಿ ಮಾಡಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹೀರಾ ನಾಯಕ, ವಿನಾಯಕ ರಾಠೋಡ, ರಾಜು ಚವ್ಹಾಣ, ಬೋಜು ಚವ್ಹಾಣ, ಸುನಿಲ್ ಚವ್ಹಾಣ, ಅಕ್ಷಯ ರಾಠೋಡ, ಗೋವಿಂದ ಚವ್ಹಾಣ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *