ಸುದ್ದಿ ಸಂಗ್ರಹ ಶಹಾಬಾದ್
ವಿದ್ಯಾರ್ಥಿಗಳು ಮತ್ತು ಯುಜನತೆಯಲ್ಲಿ ದೇಶ ಮೊದಲು ಎಂಬ ಭಾವನೆ ಮೂಡಿಸಿ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ನಿರ್ವಹಿಸುವಂತಾಗಬೇಕು ಎಂದು ಶಾಲೆಯ ಮುಖ್ಯಗುರು ಸಿಸ್ಟರ್ ಲೋವಿಟಾ ಹೇಳಿದರು.
ನಗರದ ಎಮ್‌ಸಿಸಿ ಕಾನ್ವೆಂಟ್ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಕೆಲವು ದಶಕಗಳ ಕಾಲ, ಬಡತನ, ಆರೋಗ್ಯ ಸಂಬಂಧಿತ ಸಮಸ್ಯೆ, ವೈಜ್ಞಾನಿಕ- ತಂತ್ರಜ್ಞಾನದ ಕೊರತೆ ಮತ್ತು ಆಹಾರದ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಹಿಂದುಳಿದ ದೇಶವಾಗಿತ್ತು. ಆದರೆ ಇಂದು ದೇಶದ ಪರಿಸ್ಥಿತಿಯನ್ನು ಅವಲೋಕನ ಮಾಡಿದಾಗ ನಾವು ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ಬಾಹ್ಯಾಕಾಶ ತಂತ್ರಜ್ಞಾನದಲ್ಲೂ ಕೂಡ ವಿಶ್ವ ಮಟ್ಟದ ಸಾಧನೆ ಮಾಡಿದ್ದೆವೆ. ದೇಶವು ಕೈಗೊಂಡ ಚಂದ್ರಯಾನ ಇದಕ್ಕೆ ಉದಾಹರಣೆಯಾಗಿದೆ ಎಂದರು.
ಎಸ್‌ಬಿಐ ಬ್ಯಾಂಕಿನ ಅಧಿಕಾರಿ ಜಯಶ್ರೀ ಮಾತನಾಡಿ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರು ಮತ್ತು ಯೋಧರ ತ್ಯಾಗವನ್ನು ಸ್ಮರಿಸಿ ಗೌರವ ಸಲ್ಲಿಸುವ ದಿನವಾಗಿದೆ. ಹೋರಾಟದ ಮೂಲಕ ಗುಲಾಮಗಿರಿ ಸಂಕೋಲೆಯಿಂದ ದೇಶವನ್ನು ಬಿಡುಗಡೆಗೊಳಿಸಿದ ಎಲ್ಲಾ ಹೋರಾಟಗಾರರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು.
ಪ್ರೌಢ ಶಾಲೆಯ ಮುಖ್ಯಗುರು ಸಿಸ್ಟರ್ ಸೆರೆನೆ, ನರ್ಸರಿ ಮುಖ್ಯಸ್ಥೆ ಸಿಸ್ಟರ್ ಲಿಂಡಾ, ಶಿಸ್ತು ಕಮಿಟಿ ಮುಖ್ಯಸ್ಥೆ ಹರ್ಷಿತಾ ಸಿಸ್ಟೆರ್, ಜಿಇ ಕಾರ್ಖಾನೆಯ ಅಧಿಕಾರಿ ರಾಮಕೃಷ್ಣ, ಪೊಲೀಸ್ ಸಿಬ್ಬಂದಿ ನಂದನಗೌಡ, ಪತ್ರಕರ್ತ ನಿಂಗಣ್ಣ ಜಂಬಿಗಿ ವೇದಿಕೆಯಲ್ಲಿದ್ದರು.
ಬಹುಮಾನ ವಿತರಣೆ: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಾಲೆಯಲ್ಲಿ ವಿಜೇತರಿಗೆ ಹಾಗೂ ಜಾಗೃತಿ ಅಭಿನಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿಯಿಂದ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು, ಆಪರೇಷನ್ ಸಿಂಧೂರ, ಗಾಂಧಿಜೀ ಅವರ ಹೋರಾಟ ಮತ್ತು ದೇಶದ ಗಡಿಕಾಯುವ ಯೋಧರ ಬಗ್ಗೆ ಸಾಮಾಜಿಕ ಕಾಳಜಿಯ ನೃತ್ಯ ಪ್ರದರ್ಶನ ಪಾಲಕರಿಗೆ ಆಕರ್ಷಿಸಿತು.
ಕಾರ್ಯಕ್ರಮದಲ್ಲಿ ಸಾಹೇಬಗೌಡ ಪಾಟೀಲ್, ಬಸವರಾಜ, ಗೌಡಪ್ಪಗೌಡ, ಪ್ರವೀಣ, ಹಿರಿಯ ಶಿಕ್ಷಕಿಯರು, ಶಾಲೆಯ ಶಿಕ್ಷಕರು, ಭೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದರು.
ಕಾರ್ಯಕ್ರಮವನ್ನು ಶ್ವೇತಾ ಮಂತ್ರಿ, ರಕ್ಷಿತಾ, ಪ್ರಶಾಂತ, ಸಾಕ್ಷಿ, ಪೈಸಲ್ ನಿರೂಪಿಸಿದರು, ಅಕ್ಷತಾ ಸ್ವಾಗತಿಸಿದರು, ಜಮುನಾ ಬೋರಿ ವಂದಿಸಿದರು.