ಚಿತ್ತಾಪುರ: ಜೂಜಾಟದ ಆರೋಪದಡಿ 39 ಜನರ ವಿರುದ್ಧ ಎಫ್‌ಐಆರ್‌

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣ ಸೇರಿದಂತೆ ತಾಲೂಕಿನ ಭಾಗೋಡಿ, ಮುಡಬೂಳ, ಸೂಲಹಳ್ಳಿ ಗ್ರಾಮಗಳಲ್ಲಿ ಇಸ್ಪಿಟ್, ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌ ಆಡಿದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆ.2ರಿಂದ 11ವರೆಗೆ ಒಟ್ಟು 39 ಆರೋಪಿತರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಈ ಕುರಿತು 8 ಪ್ರಕರಣಗಳು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಜೂಜಾಟ, ಬೆಟ್ಟಿಂಗ್‌ ತಡೆಗಟ್ಟಲು ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್ಐ ಮಂಜುನಾಥ ರೆಡ್ಡಿ, ಸಿಬ್ಬಂದಿ ಬಸವರಾಜ, ಅಜರುದ್ದೀನ್, ದತ್ತಾತ್ರೆಯ, ಅಯ್ಯಣ್ಣ, ಅನಿಲಕುಮಾರ, ಆನಂದ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *