ಸುದ್ದಿ ಸಂಗ್ರಹ

ಮೋಹನ್ ಭಾಗವತ್‌ಗೆ ಸಾವರ್ಕರ್ ಕೃತಿ ನೀಡಿ ಗೌರವಿಸಿದ ಬಿಜೆಪಿಗರು…..ಸುದ್ದಿ ಸಂಗ್ರಹ ವಾಡಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಸ್ಥಳೀಯ ಬಿಜೆಪಿ ಮುಖಂಡರು ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್
ಕೃತಿ ನೀಡಿ ಗೌರವಿಸಿದರು……ರಾಜ್ಯದ ವಿವಿಧೆಡೆ ಆಯೋಜನೆಗೊಂಡಿದ್ದ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಗುರುವಾರ ಸಂಜೆ ಉದ್ಯಾನ್‌ ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ವಾಡಿ ರೈಲು ನಿಲ್ದಾಣದಲ್ಲಿ ಇಳಿದು ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸುತ್ತಿದ್ದರು. ಈ ವೇಳೆ ವಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಚಕ್ರವರ್ತಿ ಸೂಲಿಬೆಲೆ ರಚಿಸಿದ ‘ಅಪ್ರತಿಮ ದೇಶಭಕ್ತ ವೀರ ಸಾವರ್ಕರ್’ ಕೃತಿ ನೀಡಿ ಗೌರವಿಸಿದರು……ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯರಾದ ಹರಿ ಗಲಾಂಡೆ, ಕಿಶನ್ ಜಾಧವ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಮಲ್ಲಿಕಾರ್ಜುನ ಸಾತಖೇಡ, ಚಂದ್ರಶೇಖರ ಹಾವೇರಿ, ಹೀರಾ ನಾಯಕ, ಸತೀಶ್ ಸಾವಳಗಿ, ಅಯ್ಯಣ್ಣ ದಂಡೋತಿ, ಮಹೇಂದ್ರಕುಮಾರ ಪುಜಾರಿ, ಮಲ್ಲಿಕಾರ್ಜುನ ಮೊರೆ, ಭರತ ರಾಠೋಡ, ಆನಂದ ಇಂಗಳಗಿ, ಶಿವಕುಮಾರ ಕರದಳ್ಳಿ, ಬನಶಂಕರ ಮಟ್ಟೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *