ಕಲಬುರಗಿ: ನೀಟ್ ಪರೀಕ್ಷೆಯಲ್ಲಿ 190ನೇ ರ‍್ಯಾಂಕ್ ಪಡೆದ ಚನ್ನಬಸವ ಕೊರಳ್ಳಿ…..ಸುದ್ದಿ ಸಂಗ್ರಹ ಕಲಬುರಗಿ
ವೈದ್ಯಕೀಯ ಶಿಕ್ಷಣದ ಕೋರ್ಸ್ ಪ್ರವೇಶಾತಿಗೆ ನಡೆಸುವ ನೀಟ್ ಪರೀಕ್ಷೆಯಲ್ಲಿ ನಗರದ ಎಸ್‌ಬಿಆರ್ ಪದವಿ ಪೂರ್ವ ಕಾಲೇಜಿನ ಚನ್ನಬಸವ ಕೊರಳ್ಳಿ 190ನೇ ರ‍್ಯಾಂಕ್ ಪಡೆಯುವ ಮೂಲಕ ಅಮೋಘ ಸಾಧನೆ ತೋರಿದಕ್ಕೆ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಹರ್ಷ ವ್ಯಕ್ತಪಡಿಸಿದ್ದಾರೆ……ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಳಂದ ತಾಲೂಕಿನಲ್ಲಿ ಸರಕಾರಿ ಪ್ರೌಢ ಶಾಲಾ ಶಿಕ್ಷಕ ಧರ್ಮರಾಯ ಕೊರಳ್ಳಿ ಅವರ ಸುಪುತ್ರ ಚನ್ನಬಸವ ಕೊರಳ್ಳಿ 720ಕ್ಕೆ 685 ಅಂಕ ಗಳಿಸಿ ಕಾಲೇಜು ಹಾಗೂ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ ಅಖಿಲ ಭಾರತ 190ನೇ ರ‍್ಯಾಂಕ್ ಗಳಿಸಿ ಕಲ್ಯಾಣ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದಕ್ಕೆ ತುಂಬಾ ಸಂತಸವಾಗುತ್ತಿದೆ ಎಂದರು…..ಚನ್ನಬಸವ ಕೊರಳ್ಳಿ ಯಾವುದೆ ಕೋಚಿಂಗ್ ಪಡೆಯದೆ ಶರಣಬಸವೇಶ್ವರ ರೆಸಿಡೆನ್ಸಿಯಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉತ್ತಮ ಬೋಧನಾ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡು ನೀಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ, ವೈದ್ಯನಾಗುವ ಗುರಿ ಹೊಂದಿದ್ದಾನೆ. ಜಿಲ್ಲೆಯ ಅನೇಕ ಸರಕಾರಿ ನೌಕರರ ಮಕ್ಕಳು ನೀಟ್‌ನಲ್ಲಿ ಉತ್ತಮ ಸಾದನೆ ಮಾಡಿ ವೈದ್ಯರಾಗುವ ಗುರಿ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಪದಾಧಿಕಾರಿಗಳಾದ ಚಂದ್ರಕಾಂತ ಏರಿ, ಶ್ರೀಮಂತ ಪಟ್ಟೇದಾರ, ಧರ್ಮರಾಯ ಜವಳಿ, ಎಂ.ಬಿ ಪಾಟೀಲ ಮತ್ತು ಸುರೇಶ ವಗ್ಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.