ಸುದ್ದಿ ಸಂಗ್ರಹ ವಾಡಿ
ರಾಷ್ಟ್ರಕ್ಕಾಗಿ ನಿಸ್ವಾರ್ಥ ಸೇವೆಯೇ ತನ್ನ ಧ್ಯೇಯವಾಗಿರಿಸಿಕೊಂಡಿದ್ದ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಆದರ್ಶಗಳು ದೇಶ ಭಕ್ತರ ಮನದಲ್ಲಿ ಎಂದೆಂದಿಗೂ ಅಜಾರಾಮರ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ 125ನೇ
ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ದಿನದಂದು ದೇಶಕ್ಕಾಗಿ ಅವರು ಮಾಡಿರುವ ತ್ಯಾಗ ಮತ್ತು ರಾಷ್ಟ್ರದ ಏಕತೆಗಾಗಿ ಅವರ ಕೊಡುಗೆ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಮುಖರ್ಜಿ ಅವರ ಪ್ರತಿ ಕಾರ್ಯದಲ್ಲೂ ದೇಶಾಭಿಮಾನ ಎದ್ದು ಕಾಣುತ್ತಿತ್ತು. ದುಷ್ಟ ಶಕ್ತಿಗಳಿಂದ ದೇಶ ವಿಭಜಿಸುವ ಹುನ್ನಾರ ನಡೆದಾಗ ಪ್ರತಿ ಹಂತದಲ್ಲೂ ಪ್ರಬಲವಾಗಿ ವಿರೋಧಿಸುತ್ತಾ ಬಂದರು. ದೇಶದ ಏಕತೆ, ಅಖಂಡತೆಗೆ ಅವರಿಗಿದ್ದ ಪ್ರೇಮ, ಕಾಳಜಿಯು ಈ ನೆಲದ ಪ್ರತಿಯೊಬ್ಬರಿಗೂ ಅವರ ಮೇಲೆ ಅಪಾರ ಗೌರವ ಇಮ್ಮಡಿಸುತ್ತದೆ.
ಕಾಶ್ಮೀರದಲ್ಲಿ ‘ಏಕ್ ದೇಶ್ ಮೇ ದೋ ವಿಧಾನ್’ ಇರಬಾರದು ಎಂದು ಪ್ರತಿಪಾದಿಸಿ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ್ದರು ಎಂದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಮೋದಿ ನೇತೃತ್ವದ ಸರ್ಕಾರ,
ಮುಖರ್ಜಿ ಅವರ ತ್ಯಾಗಕ್ಕೆ ಅತ್ಯಂತ ಸೂಕ್ತವಾದ ಗೌರವ ನೀಡಿದೆ. ಇದರಿಂದ ಇಂದು ಇಡಿ ಭಾರತ ಹೆಮ್ಮೆಪಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಠಲ ವಾಲ್ಮೀಕ ನಾಯಕ, ಅರ್ಜುನ ಕಾಳೆಕರ, ಹರಿ ಗಲಾಂಡೆ, ಭೀಮಶಾ ಜೀರೊಳ್ಳಿ, ಶಿವಶಂಕರ ಕಾಶೆಟ್ಟಿ, ರಿಚರ್ಡ್ ಮಾರೆಡ್ಡಿ, ಪ್ರಕಾಶ ಪುಜಾರಿ, ಕಾಶಿನಾಥ ಶೆಟಗಾರ, ಯಂಕಮ್ಮ ಗೌಡಗಾಂವ, ಮಲ್ಲಿಕಾರ್ಜುನ ಸಾತಖೇಡ, ರೇವಪ್ಪ ಅರಣಕಲ್, ಶಿವಕುಮಾರ ಮಟ್ಟೂರ, ಶಾಂತಪ್ಪ ಸೇರಿದಂತೆ ಅನೇಕರು ಇದ್ದರು.