ಶಹಾಬಾದ: ಅ.15 ರಂದು ಕಾಳಗಿಯಲ್ಲಿ ಮತ್ತು ಅ.21 ರಂದು ಶಹಾಬಾದನಲ್ಲಿನ ಜಾನುವಾರುಗಳ ಕಳ್ಳತನ ಮಾಡಿದ ಕಳ್ಳರ ಬಂಧಿಸಲಾಗಿದೆ ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಳಗಿಯಲ್ಲಿ ಅ.15 ರಂದು ರಾತ್ರಿ ಸುಮಯದಲ್ಲಿ 35 ಸಾವಿರ ಮೌಲ್ಯದ ಕಪ್ಪು ಬಣ್ಣದ ಒಂದು ಆಕಳು ಮತ್ತು 30 ಸಾವಿರ ಮೌಲ್ಯದ ಕೆಂಪು ಬಣ್ಣದ ಒಂದು ಆಕಳು ಕಳ್ಳತನ ಮಾಡಲಾಗಿತ್ತು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು ಮತ್ತು ಶಹಾಬಾದ ನಗರದ ಬಸವೇಶ್ವರ ಕಾಲೋನಿಯಲ್ಲಿ ಅ.20 ರಂದು ಮನೆಯ ಮುಂದಿನ ಅಂಗಳದಲ್ಲಿ ಕಟ್ಟಿದ 20 ಸಾವಿರ ಮೌಲ್ಯದ ಕೆಂಪು ಬಣ್ಣದ ಆಕಳು, 5 ಸಾವಿರ ಮೌಲ್ಯದ ಹೊರಿಕರು, 20 ಸಾವಿರ ಮೌಲ್ಯದ ಕಪ್ಪು- ಬಿಳಿ ಬಣ್ಣದ ಆಕಳು ಮತ್ತು 5 ಸಾವಿರ ಮೌಲ್ಯದ ಆಕಳು ಕರು ಕಳ್ಳತನ ಮಾಡಲಾಗಿತ್ತು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು ಎಂದರು.
ಕಾಳಗಿ ಮತ್ತು ಶಹಾಬಾದನಲ್ಲಿ ಜಾನುವಾರಗಳ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಕಾಳಗಿಯಲ್ಲಿ ಜಾನುವಾರಗಳ ಕಳ್ಳತನ ಮಾಡಿದ ಜೀಲಾನಿ ತಂದೆ ಚಿತ್ತಾವಲಿ ಮುಜಾವರ, ಶ್ರೀಮಂತ ತಂದೆ ಅಂಬೋಜಿ ನಾಶೇರ, ಸೈಯ್ಯದ ನಯೂಮ್ ತಂದೆ ಶಬೀರಮಿಯಾ ಹುಳಗೇರಾ ಇವರನೆ ಬಂಧಿಸಲಾಗಿದೆ. ಆರೋಪಿತರು ಕಾಳಗಿ ಹಳೆ ಬಸ್ ನಿಲ್ದಾಣ ಹತ್ತಿರ ಎರಡು ಆಕಳು ಕಳ್ಳತನ ಮಾಡಿ ಮಾರಾಟ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ. ಆರೋಪಿತರಿಂದ 30 ಸಾವಿರ ರೂ ನಗದು ಹಣ ಜಪ್ತಿ ಪಡೆಸಿಕೊಂಡು, ಮೂರು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಶಹಾಬಾದನಲ್ಲಿ ಜಾನುವಾರಗಳ ಕಳ್ಳತನ ಮಾಡಿದ ಮಹ್ಮದ ಅಖಲಾಕ್ ತಂದ ಮಹ್ಮದ ರಫೀಕ್ ಖುರೇಷಿಯನ್ನು ಬಂಧಿಸಲಾಗಿದೆ. ಕಳ್ಳತನ ಮಾಡಿದ ಜಾನುವಾರುಗಳನ್ನು ಮಳಖೇಡ ಸಂತೆಯಲ್ಲಿ ಮಾರಾಟ ಮಾಡಿರುವುದಾಗಿ ತಪ್ಪಪ್ಪಿಕೊಂಡಿದ್ದಾನೆ. ಆತನಿಂದ 30 ಸಾವಿರ ರೂ ಮತ್ತು ಜಾನುವಾರ ಸಾಗಿಸಲು ಬಳಸಿದ ಅಪ್ಪೆ ಕಂಪನಿಯ ಗೂಡ್ಸ್ ಟಂ.ಟಂ ಅನ್ನು ವಶಪಡಿಸಿಕೊಂಡಿದ್ದೆವೆ, ಆರೋಪಿಯಿಂದ 30 ಸಾವಿರ ರೂ ನಗದು ಹಣ ಜಪ್ತಿ ಪಡೆಸಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಶಹಾಬಾದ ಪಿಐ ನಟರಾಜ ಲಾಡೆ, ಕಾಳಗಿ ಪಿಎಸ್ಐ ತಿಮ್ಮಯ್ಯಾ, ಎಎಸ್ಐ ಶ್ರೀನಿವಾಸರೆಡ್ಡಿ, ಅಶೋಕ ಕಟ್ಟಿ, ಸಿಬ್ಬಂದಿಗಳಾದ ದೊಡ್ಡಪ್ಪ, ಅಂಬರೀಶ್ ಬಿರಾದಾರ, ಶಿವರಾಜ, ಹುಸೇನ ಪಾಷ, ಮಂಜುನಾಥ ಇದ್ದರು.