ಸುದ್ದಿ ಸಂಗ್ರಹ ಶಹಾಬಾದ್
ನಗರದ ಲಕ್ಷ್ಮಿ ಗಂಜ್ ಬಡಾವಣೆಯಲ್ಲಿ ಸಾರ್ವಜನಿಕ ಸೌಲಭ್ಯಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬಡಾವಣೆಯಲ್ಲಿ ಕುಡಿಯುವ ನೀರಿನ ಮೂಲವಾದ ಬೋರ್ವೆಲ್ ಕೆಟ್ಟುಹೋಗಿ ಹಲವು ದಿನಗಳಾಗಿದ್ದರೂ ನಗರಸಭೆ ಯಾವುದೆ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಬಡಾವಣೆಯಲ್ಲಿ ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ ಸೃಷ್ಟಿಯಾಗಿದೆ.
ದೂರದಿಂದ ನೀರು ಹೊರುತ್ತಿರುವ ನಿವಾಸಿಗಳು: ಬೋರ್ವೆಲ್ ದುರಸ್ತಿಯಾಗದ ಕಾರಣ ಬಡಾವಣೆಯ ನಿವಾಸಿಗಳು ನಿತ್ಯದ ಬಳಕೆಗೆ ಹಾಗೂ ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ನಡೆದುಕೊಂಡು ಹೋಗಿ ನೀರು ತರಬೇಕಾದ ದುಸ್ಥಿತಿ ಎದುರಾಗಿದೆ. ಇನ್ನು ಇಲ್ಲಿನ ಶಾಲೆಯ ಮಕ್ಕಳ ಪಾಡಂತೂ ಹೇಳ-ತೀರದಾಗಿದೆ. ಶಾಲಾ ಮಕ್ಕಳು ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದು, ಅವರ ಶಿಕ್ಷಣ ಹಾಗೂ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಕಸದ ವಿಲೇವಾರಿ ವೈಫಲ್ಯ – ಹರಡುತ್ತಿರುವ ರೋಗಗಳ ಭೀತಿ: ಶಹಾಬಾದ ನಗರದಲ್ಲಿ ಕಸ ವಿಲೇವಾರಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದ್ದು. ಬೆಳಗ್ಗೆ 6 ಗಂಟೆಗೆ ಸಾರ್ವಜನಿಕರು ನಿದ್ದೆಯಿಂದ ಏಳುವ ಮೊದಲೇ ನಗರದಲ್ಲಿ ಕಸದ ಗಾಡಿ ಬಂದು ಹೋಗಿರುತ್ತದೆ. ಬೆಳ್ಳಗೆ 8 ಗಂಟೆಯ ನಂತರ ನಗರಲ್ಲಿ ಕಸದ ಗಾಡಿಗಳು ಕಣ್ಣಿಗೂ ಕಾಣಲ್ಲ, ಒಂದು ದಿನ ಕಸದ ಗಾಡಿ ಬಂದರೆೆ ಎರಡು ಮೂರು ದಿನ ಬರಲ್ಲ. ನಗರದಲ್ಲಿ ನೀರಿನ ಸಮಸ್ಯೆಯ ಜೊತೆಗೆ ಬಡಾವಣೆಯಲ್ಲಿ ಕಸದ ವಿಲೇವಾರಿ ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ದುರ್ವಾಸನೆ ಹರಡುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. “ನಗರಸಭೆಯ ಲಕ್ಷ್ಮಿ ಗಂಜ್ ಬಡಾವಣೆಯ ಸಮಸ್ಯೆಗಳ ಕುರಿತು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ” ಎಂದು ಸ್ಥಳೀಯ ನಿವಾಸಿ ರೇವಣಸಿದ್ಧ, ಸೈಯದ ಅಬ್ಬಾಸ್ ಹುಸೇನ ಗೋಟುರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಆಗ್ರಹ: ನಗರಸಭೆಯ ಉನ್ನತ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಕೆಟ್ಟುಹೋಗಿರುವ ಬೋರ್ವೆಲ್ ಅನ್ನು ಯುದ್ಧೋಪಾದಿಯಲ್ಲಿ ದುರಸ್ತಿ ಮಾಡಿಸಬೇಕು. ಹಾಗೆ ಬಡಾವಣೆಯಲ್ಲಿ ಕಸದ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ
ನಗರಸಭೆ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಡಾವಣೆಯ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.