ಶಹಾಬಾದ್: ನಗರದ ವಿವಿಧ ಬಡಾವಣೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ನಗರದ ಎಸ್-4 ಟೌನ್ ಫೀಡರ್ ವ್ಯಾಪ್ತಿಯಲ್ಲಿ ತುರ್ತು ವಿದ್ಯುತ್ ವಾಹಕ ಬದಲಾವಣೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ, ಜೂನ್ 12 ರಂದು ಶುಕ್ರವಾರ ಬೆಳಗ್ಗೆ 8:30 ರಿಂದ ಸಂಜೆ 5:30 ರವರೆಗೆ ನಗರದ ಪ್ರಮುಖ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಶಹಾಬಾದ ಜೆಸ್ಕಾಂ ಎಇಇ ಅಧಿಕಾರಿ ಸೈಯದ ಯೂನೂಸ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜೂನ್ 12 ರಂದು ನಗರದ ಲಕ್ಷ್ಮಿ ಗಂಜ, ಶಾಸ್ತ್ರಿ ಚೌಕ, ನಾಲಾ ಟೇಕ್, ಅಪ್ಪರ ಮಡ್ಡಿ, ರೈಲ್ವೆ ಗೇಟ್, ಮಿಲ್ಲತ್ ನಗರ, ಹನುಮಾನ ನಗರ (ವಡ್ಡರ ಸಂಘ), ಸುಭಾಷ ಚೌಕ, ವಿಪಿ ಚೌಕ ಮತ್ತು ಸುತ್ತಮುತ್ತಲಿನ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆ, ವಿದ್ಯುತ್ ಲೈನ್ ಕಾಮಗಾರಿಯು ಸಾರ್ವಜನಿಕರ ಹಿತದೃಷ್ಟಿಯಿಂದ ಅತ್ಯಗತ್ಯವಾಗಿರುವುದರಿಂದ, ಮೇಲ್ಕಂಡ ಪ್ರದೇಶದ ಗ್ರಾಹಕರು ಮತ್ತು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ ಎಂದು ಜೆಸ್ಕಾಂ ಎಇಇ ಅಧಿಕಾರಿ ಸೈಯದ ಯೂನೂಸ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *