ಸುದ್ದಿ ಸಂಗ್ರಹ

ಸುದೀರ್ಘ ಅವಧಿ ಪ್ರಧಾನಿಯಾಗಿ ನರೇಂದ್ರ ಮೋದಿ ಹೊಸ ದಾಖಲೆ: ವೀರಣ್ಣ ಯಾರಿ…..ಸುದ್ದಿ ಸಂಗ್ರಹ ವಾಡಿ
ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೆ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಆಯ್ಕೆಯಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಅವರು ಭಾಜನರಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಪಟ್ಟಣದ ಶಕ್ತಿ ಆಂಜನೇಯ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಮೋದಿ ಅವರ ಕಟೌಟ್’ಗೆ ಹಾಲಿನ ಅಭಿಷೇಕ ಮಾಡಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು…….ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹತ್ವದ ರಾಜಕೀಯ ಮೈಲಿಗಲ್ಲು ತಲುಪಿದ್ದಾರೆ ಎಂದರು…….ನಿರಂತರವಾಗಿ 4,399 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ದಾಖಲೆಯನ್ನು ಹಿಂದಿಕ್ಕಿ, ದೇಶದ ಅತಿ ದೀರ್ಘಾವಧಿ, ನಿರಂತರ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಹೊರಹೊಮ್ಮಿದ್ದಾರೆ, ಇದರಿಂದ ಇಡಿ ದೇಶ ಸ್ವಾಭಿಮಾನದಿಂದ ಸಂತಸ ಪಡುತ್ತಿದೆ ಎಂದರು……ಇವರ ನಾಯಕತ್ವಕ್ಕೆ ವಿಶ್ವದ ಬಹುತೇಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರುತ್ತಿದ್ದಾರೆ. ಇವರ ನಾಯಕತ್ವದಿಂದ ನಮ್ಮ ದೇಶಕ್ಕೆ ಹೊಸ ದಿಕ್ಕು, ಹೊಸ ಆವೇಗ ಮತ್ತು ಆತ್ಮವಿಶ್ವಾಸ ತುಂಬಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಿಂದ ಹಿಡಿದು 370ನೇ ವಿಧಿ ರದ್ದುಗೊಳಿಸುವವರೆಗೆ, ಜಮ್ಮು- ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯದಿಂದ ವಿಶ್ವ ದರ್ಜೆಯ ಹೆದ್ದಾರಿ ಜಾಲದವರೆಗೆ, ಡಿಜಿಟಲ್ ಇಂಡಿಯಾದಿಂದ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನದವರೆಗೆ ಭಾರತವು ಪ್ರತಿಯೊಂದು ವಲಯದಲ್ಲೂ ಅಭೂತಪೂರ್ವ ಪರಿವರ್ತನೆಗೆ ಸಾಕ್ಷಿಯಾಗಿದೆ. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಪ್ರಧಾನಿ ಮೋದಿ ಅವರ ರಾಷ್ಟ್ರಸೇವೆ ಅಜರಾಮರವಾಗಿದೆ. ಇಡಿ ಜೀವನವನ್ನೆ ರಾಷ್ಟ್ರಕ್ಕಾಗಿ ಸಮರ್ಪಿಸಿಕೊಂಡ ಮೋದಿಯವರ ಪ್ರತಿಯೊಂದು ಕಾರ್ಯವು ಯಶಸ್ವಿಯಾಗಲಿ, ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನಷ್ಟು ಶಕ್ತಿಯಿಂದ ದೇಶ ಸೇವೆಯನ್ನು ಮುಂದುವರಿಸಲಿ ಎಂದು ಆಂಜನೇಯನಲ್ಲಿ ಪ್ರಾರ್ಥಿಸಿ ಅವರಿಗೆ ಹೃತ್ಪೂರ್ವಕವಾಗಿ ಶುಭಾಶಯ ಕೋರುತ್ತಿದ್ದೆವೆ ಎಂದರು……ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಕಿಶನ್ ಜಾಧವ, ಮಲ್ಲಿಕಾರ್ಜುನ ಸಾತಖೇಡ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ, ವಿಶ್ವರಾಧ್ಯ ತಳವಾರ, ಜಿತೇಂದ್ರ ಚವ್ಹಾಣ, ಸುರೇಶ ನಾಯಕ, ಶಿವಲಿಂಗಯ್ಯ ಯಂಕಚಿ, ಮೌನೇಶ ವಿಶ್ವಕರ್ಮ, ಯುವರಾಜ ರಾಠೋಡ, ಗೋಪಾಲ ಜಾಧವ, ಲಖನ ಚವ್ಹಾಣ, ಬಾಲರಾಜ ಪಗಡೀಕರ್, ವಿಶ್ವನಾಥ ಕಲ್ಲಶೆಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡು ಮೋದಿ ಅವರ ಜಯ ಘೋಷ‌ ಮೊಳಗಿಸಿದರು.

Leave a Reply

Your email address will not be published. Required fields are marked *