ಸುದ್ದಿ ಸಂಗ್ರಹ ಶಹಾಬಾದ್
ಸಸಿ ನೆಟ್ಟು ಬೆಳೆಸುವ ಕಾರ್ಯ ಕೇವಲ ಪರಿಸರ ದಿನಕ್ಕೆ ಸೀಮಿತವಾಗದೆ ಪ್ರತಿಯೊಬ್ಬರು ಮನೆಗೊಂದು ಮರ ಬೆಳೆಸಿ ಪರಿಸರ ಸಮತೋಲನಕ್ಕೆ ಸಹಕಾರ ನೀಡಬೇಕು ಎಂದು ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಸವರಾಜ ಹಿರೇಮಠ ಹೇಳಿದರು.
ನಗರದ ಎಸ್.ಎಸ್ ಮರಗೋಳ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮೆಲ್ಲರ ಆರೋಗ್ಯಕರ ಬದುಕು ಮರಗಿಡಗಳ ಸಂರಕ್ಷಣೆ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಡಾ.ವೆಂಕಟರಾಜಪ್ಪ, ರಾಮಣ್ಣ ಇಬ್ರಾಹಿಂಪುರ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.