4 ಐಪಿಎಲ್‌ ಆವೃತ್ತಿ: ವಿಶಿಷ್ಟ ದಾಖಲೆ ಬರೆದ ಕೊಹ್ಲಿ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಅಹಮದಾಬಾದ್
ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೇಸಿಂಗ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ವಿಶಿಷ್ಟ ದಾಖಲೆ ಬರೆದಿದ್ದಾರೆ. ಸತತ 4 ಐಪಿಎಲ್‌ ಆವೃತ್ತಿಯಲ್ಲಿ 600 ರನ್‌ಗಳ ಗಡಿ ದಾಟಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ.

ಈ ಪಂದ್ಯದಲ್ಲಿ 25 ಎಸೆತಗಳಲ್ಲಿ ಅರ್ಧಶತಕ ಹೊಡೆದ ಕೊಹ್ಲಿ ಅಂತಿಮವಾಗಿ ಅಜೇಯ 75 ರನ್‌ (42 ಎಸೆತ, 9 ಬೌಂಡರಿ, 3 ಸಿಕ್ಸ್‌) ಹೊಡೆದು ಎರಡನೇ ಬಾರಿ ಆರ್‌ಸಿಬಿಗೆ ಕಪ್‌ ಗೆದ್ದುಕೊಟ್ಟಿದ್ದಾರೆ.

ಯಾವ ವರ್ಷ ಎಷ್ಟು ರನ್‌ ?
2023: 14 ಇನ್ನಿಂಗ್ಸ್‌ – 639 ರನ್‌
2024: 15 ಇನ್ನಿಂಗ್ಸ್‌ – 741 ರನ್‌ (ಆರೆಂಜ್‌ ಕ್ಯಾಪ್‌)
2025: 16 ಇನ್ನಿಂಗ್ಸ್‌ – 657 ರನ್‌
2026: 16 ಇನ್ನಿಂಗ್ಸ್‌ – 675 ರನ್‌

ಈ ಆವೃತ್ತಿಯಲ್ಲಿ ಕೊಹ್ಲಿ 4 ಬಾರಿ ನಾಟೌಟ್‌ ಆಗಿದ್ದರು. ಒಂದು ಶತಕ (105* ರನ್‌), 5 ಅರ್ಧಶತಕ ಹೊಡೆದಿದ್ದಾರೆ. ಒಟ್ಟು 73 ಬೌಂಡರಿ, 25 ಸಿಕ್ಸ್‌, 165.84 ಸ್ಟ್ರೈಕ್‌ ರೇಟ್‌ನಲ್ಲಿ ಕೊಹ್ಲಿ 675 ರನ್‌ ಚಚ್ಚಿದ್ದಾರೆ.

Leave a Reply

Your email address will not be published. Required fields are marked *