ಸುದ್ದಿ ಸಂಗ್ರಹ ಶಹಾಬಾದ್
ರಾವೂರಯಿಂದ ಶಹಾಬಾದ್ ಕಡೆಗೆ ಬರುವಾಗ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್’ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ಮೃತಪಟ್ಟಿದ್ದಾರೆ.
ರಾವೂರ ಮತ್ತು ಮಾಲಗತ್ತಿಯ ರಾಜ್ಯ ಹೆದ್ದಾರಿ–150ರಲ್ಲಿ ಘಟನೆ ಜರುಗಿದೆ. ಹಳೆಯ ಶಹಾಬಾದ್ ನಿವಾಸಿ ಮಹ್ಮದ್ ಕಾಸಿಂ ತಂದೆ ಮಹ್ಮದ್ ಇಬ್ರಾಹಿಂ (22) ಮೃತರು. ಕಾಸಿಂ ಅವರು ತನ್ನ ಸ್ನೇಹಿತ ಅಬ್ದುಲ್ ಹಕೀಮ್ ಜೊತೆ ಸೇರಿ ಬೈಕ್ನಲ್ಲಿ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಬೈಕ್ ನಡೆಸುತ್ತಿದ್ದ ಅಬ್ದುಲ್ ಹಕೀಮ್ ಎಂಬಾತನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಹಿಂಬದಿ ಸವಾರನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಶಹಾಬಾದ್ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.