ಸುದ್ದಿ ಸಂಗ್ರಹ ಶಹಾಬಾದ್
ನೇತಾಜಿ ಸುಭಾಷ್ ಚಂದ್ರ ಬೋಸ್’ರ 129ನೇ ಜನ್ಮ ದಿನಾಚರಣೆ ಅಂಗವಾಗಿ 13ನೇ ಸಾಂಸ್ಕೃತಿಕ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಎಐಎಂಎಸ್ಎಸ್ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ ಹೇಳಿದರು.
ಹನುಮಾನ ನಗರ ಸಂಘಟನಾ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಡಿವೈಓ, ಎಐಡಿಎಸ್ಓ ಮತ್ತು ಎಐಎಂಎಸ್ಎಸ್ ವತಿಯಿಂದ ಸಿದ್ದರಾಮೇಶ್ವರ ಶಾಲಾ ಆವರಣದಲ್ಲಿ ಫೆ.9 ಮತ್ತು 10ರಂದು ಸಂಜೆ 5:30ಕ್ಕೆ ಸಂಸ್ಕೃತಿಕ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಸಂಸ್ಕೃತಿಕ ನಾಟಕ, ನೃತ್ಯ, ಜಾನಪದ ಗೀತೆ, ಕೋಲಾಟ, ಡೊಳ್ಳಿನ ಪದ, ಸಿನಿಮಾ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ, ಆದಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಗನ್ನಾಥ ಎಸ್.ಎಚ್, ರಮೇಶ ದೇವಕರ, ದೇವರಾಜ ರಾಜೋಳ್, ರಾಘು ಪವಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.