ಸುದ್ದಿ ಸಂಗ್ರಹ ಬೆಂಗಳೂರು
ಚಿನ್ನದ ಬೆಲೆ ಒಂದೆ ದಿನಕ್ಕೆ ಈ ಹಿಂದಿನ ಎಲ್ಲಾ ದಾಖಲೆ ಮುರಿದು ಬರೋಬ್ಬರಿ 5,020 ರೂ ಹೆಚ್ಚಳವಾಗುವ ಮೂಲಕ ಸಾರ್ವಕಾಲಿಕ ಗರಿಷ್ಠ ದರ 1,54,800 ರೂ ಏರಿದೆ.
ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ ?
ಜನವರಿ 21 2026, ಬುಧವಾರದಂದು ಮಾರುಕಟ್ಟೆಯಲ್ಲಿ ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 15,480 ರೂ ಇತ್ತು, ಇಂದು 502 ರೂ ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,54,800 ರೂ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 5,020 ರೂ ಏರಿಕೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ ನಿನ್ನೆ 14,190 ರೂ ಇತ್ತು, ಇಂದು 460 ರೂ ಏರಿಕೆಯಾಗಿದೆ. 10 ಗ್ರಾಂ ಬೆಲೆ 1,41,900 ರೂ ಇತ್ತು. ಇಂದು 10 ಗ್ರಾಂ ನಲ್ಲಿ 4600 ರೂ ಏರಿಕೆಯಾಗಿದೆ.
ಬೆಂಗಳೂರಿನ ಚಿನ್ನ-ಬೆಳ್ಳಿ ದರ ಎಷ್ಟಿದೆ ?
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15,480 ರೂ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,54,800 ರೂ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.
ಬೆಳ್ಳಿ ಬೆಲೆ ಭಾರಿ ಏರಿಕೆ
ಬೆಳ್ಳಿ ಬೆಲೆ ಇಂದು 5 ರೂ ಏರಿಕೆಯಾಗಿದ್ದು, ಗ್ರಾಂ ಬೆಲೆ 325 ರೂ ಆಗಿದ್ದು, ಕೆಜಿ ಬೆಲೆಯಲ್ಲಿ 5 ಸಾವಿರ ಹೆಚ್ಚಳ ಆಗಿ, ಕೆಜಿಗೆ 3,25,000 ರೂಪಾಯಿಗೆ ಏರಿದೆ.