ಸೀತನಿಯ ಸಿಹಿ ತಿಂದು ಸಂಭ್ರಮಿಸುವ ಸಮಯ
ಜೋಳದ ತೆನೆಯಲ್ಲಿ ಕಾಳುಗಳು ಗಟ್ಟಿಯಾಗುವ ಮುನ್ನ ಹಸಿಯಾದ ಮತ್ತು ಮೆತ್ತಗೆ ಇರುವ ಸ್ಥಿತಿಯನ್ನು ಸೀತನಿ ಎಂದು ಕರೆಯುತ್ತಾರೆ. ರುಚಿಕರ ಮತ್ತು ಪೌಷ್ಟಿಕಾಂಶ ಹೊಂದಿರುತ್ತದೆ. ಜನವರಿ ಶೀತನಿ ಸಿಗುತ್ತದೆ. ಜನರು ಈ ತೆನೆ ಸುಟ್ಟು ಇಷ್ಟಪಟ್ಟು ಸೇವಿಸುತ್ತಾರೆ. ಇದು ಹೆಚ್ಚು ಶೇಂಗಾ ಚಟ್ನಿ, ಉಪ್ಪು,ಬೆಲ್ಲದ ಜತೆಗೆ ಸೇವಿಸಿದರೆ ಅದರ ರುಚಿ ಅನುಭವಿಸಿದವರೇ ಬಲ್ಲರು.
ಉತ್ತರ ಕರ್ನಾಟಕದಲ್ಲಿ ವರ್ಷಕ್ಕೆ ಒಂದು ಬಾರಿ ಸಿಗುವ ಜನಪ್ರಿಯ ತಿನಿಸು ಸೀತನಿ. ತೆಂಗಳಿ ಗ್ರಾಮದ ಪ್ರಗತಿಪರ ರೈತ ಉಲ್ಲಾಸ್ ದೇಶಪಾಂಡೆ ಸೀತನಿ ಬೆಳೆದಿದ್ದಾರೆ.
ಕಾಳಗಿ: ತಾಲೂಕು, ತೆಂಗಳಿ ಗ್ರಾಮದ ಸಾವಯವ ಕೃಷಿಕ ಉಲ್ಹಾಸ್ ದೇಶಪಾಂಡೆ, ಸಾವಯವ ಪದ್ಧತಿಯಲ್ಲಿ ಬೆಳೆದ, ವಿಶೇಷ ತಳಿಯ ಜೋಳದ ಸೀತನಿ ಯ ರುಚಿ ತಾವೆಲ್ಲರೂ ಕಳೆದ ಅನೇಕ ವರ್ಷಗಳಿದ ಸವಿದಿದ್ದೀರಿ-ನನ್ನನ್ನು ಪ್ರೋತ್ಸಾಹಿಸಿದ್ದೀರಿ,
ಈ ವರ್ಷದ ಸೀತನಿ ಯಾವಾಗ ಬರುತ್ತದೆ ಎಂದು ತಾವೆಲ್ಲರೂ ದಾರಿ ಕಾಯುತ್ತಿದ್ದೀರಿ, ನನ್ನನ್ನು ಫೋನ್ ಮೂಲಕ ಸಂಪರ್ಕಿಸಿದ್ದೀರಿ, ತಮ್ಮೆಲ್ಲರ ಕಾಯುವಿಕೆ, ನಿರೀಕ್ಷೆ, ಕಾತುರತೆ ಕೊನೆಯಾಗಲಿದೆ, ಹೌದು, ವಿಶೇಷ ತಳಿಯ, ಸಾವಯವ ಪದ್ಧತಿಯಲ್ಲಿ ಬೆಳೆದ, ರುಚಿ, ರುಚಿಯಾದ
“ತೆಂಗಳಿ ಜೋಳದ ಸೀತನಿ” ಬರುವ ಗುರುವಾರ, ಜನೆವರಿ 8 ರಂದು ನಿಮ್ಮ ಕೈ ಸೇರಲಿದೆ,
ದಯವಿಟ್ಟು ಮುಂಚಿತವಾಗಿ ಮೊಬೈಲ್ ನಂಬರ್ 9845913103 ಮೂಲಕ ಸಂಪರ್ಕಿಸಿ ತಮ್ಮ ಅವಶ್ಯಕತೆಯನ್ನು ತಿಳಿಸ ಬೇಕಾಗಿ ಮನವಿ,
ಪ್ರತಿವರ್ಷದಂತೆ ಈ ವರ್ಷವೂ ದಯವಿಟ್ಟು ತಾವೆಲ್ಲರೂ ಪ್ರೋತ್ಸಾಹಿಸಿ ಸಹಕರಿಸಬೇಕೆಂದು ವಿನಂತಿ,
ಧನ್ಯವಾದಗಳು,
🙏🙏
-ಉಲ್ಹಾಸ್.ಕೆ. ದೇಶಪಾಂಡೆ ,
ಸಾವಯವ ಕೃಷಿಕ,
ಗ್ರಾಮ—–ತೆಂಗಳಿ,
ತಾಲೂಕು–ಕಾಳಗಿ,
ಜಿಲ್ಹೆ——–ಕಲಬುರಗಿ,
ಮೊ– 9845913103