ಸುದ್ದಿ ಸಂಗ್ರಹ ಶಹಾಬಾದ
ಸಹೋದರರೆ, ನಾನು ನಿಮ್ಮ ತಂಗಿಯರಿಗೆ ವಿದ್ಯೆ ಕಲಿಸುವ ಪವಿತ್ರ ಕೆಲಸ ಮಾಡುತ್ತಿದ್ದೆನೆ, ನೀವು ನನ್ನ ಮೇಲೆ ಸಗಣಿ ಮತ್ತು ಕಲ್ಲುಗಳು ಎಸೆದರೂ ನೀವು ಹೂವಿನ ಮಳೆ ಸುರಿಸುತ್ತಿದ್ದಿರಿ ಎಂದು ಭಾವಿಸಿ ನಾನು ಧೈರ್ಯವಾಗಿ ಕಾರ್ಯನಿರ್ವಹಿಸುತ್ತೆನೆ ಎನ್ನುತ್ತಿದ್ದರು ಸಾವಿತ್ರಿಬಾಯಿ ಫುಲೆ ಎಂದು ಎಐಡಿವೈಓ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಎಚ್ ಹೇಳಿದರು.
ಹನುಮಾನ ನಗರದ ಎಐಡಿವೈಓ ಸ್ಥಳೀಯ ಸಮಿತಿ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಣೆಯ ಭಿಡೆವಾಡಾ ಶಾಲೆಗೆ ಅವರು ನಡೆದುಕೊಂಡು ಹೋಗುತ್ತಿರುವಾಗ, ಪ್ರತಿದಿನವೂ ಕೆಲವರು ಅವರಿಗಾಗಿ ಕಾಯುತ್ತಿದ್ದರು. ಅವರ ಮೇಲೆ ಕೆಸರು, ಸಗಣಿ ಮತ್ತು ಕಲ್ಲುಗಳು ಎಸೆಯುತ್ತಿದ್ದರು ಸಹ ಅವರು ಹೆಣ್ಣು ಮಕ್ಕಳಿಗೆ ಪಾಠ ಮಾಡುವುದು ಬಿಡಲಿಲ್ಲ ಎಂದರು.
ಈಗಿನ ಸರ್ಕಾರಗಳು ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮರೆಮಾಚುತ್ತಿದೆ. ಬಡವರ ಶಿಕ್ಷಣ ಕಸಿದುಕೊಳ್ಳುತ್ತಿದೆ, ಹೋರಾಟ ಚಳುವಳಿಗಳು ಹತ್ತಿಕ್ಕುತ್ತಿದೆ ಇಂತಹ ಸರ್ಕಾರದ ನೀತಿಗಳ ವಿರುದ್ಧ ಯುವಜನರು ಒಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಿದ್ದು ಚೌದ್ರಿ, ರಮೇಶ್ ದೇವಕರ್, ದೇವರಾಜ್ ಮಿರಲ್ಕರ್, ಚಂದ್ರಕಾಂತ್ ದೇವಕರ್, ಶೇಟೆಪ್ಪ ಭೋರಗಿ ಮಲ್ಲಿಕಾರ್ಜುನ್, ಶರಣು ಸೇರಿದಂತೆ ಅನೇಕರು ಇದ್ದರು.