ಸುದ್ದಿ ಸಂಗ್ರಹ ಬೆಂಗಳೂರು
ಹೊಸ ವರ್ಷದ ಸುಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಹೊಸ ವರ್ಷದ ಶುಭಾಶಯ ಕೋರಿದರು.
ನಂತರ ದೀಪಕ್ ಹೊಸ್ಸೂರಕರ್ ಮಾತನಾಡಿ, ಹೊಸ ವರ್ಷವು ನಿಮಗೆ ಹೊಸ ಗುರಿ, ಹೊಸ ಸಾಧನೆ, ಹೊಸ ಯಶಸ್ಸಿಗೆ ದಾರಿಯಾಗಲಿ. ನೀವು ಸಾಗುವ ದಾರಿ ಹೂವಿನ ಹಾಸಿಗೆಯಂತಿರಲಿ ಎಂಬ ಹಾರೈಕೆ ನನ್ನದು. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹೃದಯಪೂರ್ವಕ ಶುಭಾಶಯಗಳು ಎಂದರು.
ಇದೆ ಸಂದರ್ಭದಲ್ಲಿ ಹೊಸ ವರ್ಷದ ಡೈರಿ ಬಿಡುಗಡೆ ಮಾಡಲಾಯಿತು.