ಮಾದರಿ ಆಡಳಿತಗಾರ ಶ್ರೀಕೃಷ್ಣ ದೇವರಾಯ: ಎಚ್.ಬಿ ಪಾಟೀಲ್

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಎಲ್ಲಾ ಪ್ರಜೆಗಳಿಗೆ ಸಮಾನವಾಗಿ ಕಂಡು ಅಭಿವೃದ್ಧಿ ಬಯಸುತ್ತಿದ್ದ ಶ್ರೀಕೃಷ್ಣದೇವರಾಯ ಮಾದರಿ, ಶಕ್ತಿಶಾಲಿ ಮತ್ತು ಪ್ರಸಿದ್ಧ ಅರಸ. ವಿಜಯನಗರ ಸಾಮ್ರಾಜ್ಯ ಜಗತ್ತಿನಲ್ಲಿ ಪ್ರಸಿದ್ಧವಾಗಲು ಅವರ ಜನಪರ ಕಾರ್ಯಗಳೆ ಆಧಾರವಾಗಿವೆ. ರಸ್ತೆ ಬದಿಯಲ್ಲಿ ವಜ್ರ, ವೈಡುರ್ಯ, ಚಿನ್ನ, ಬೆಲೆ ಬಾಳುವ ವಸ್ತುಗಳು ಮಾರಾಟ ಮಾಡುತ್ತಿದ್ದ ಶ್ರೀಮಂತ ಸಾಮ್ರಾಜ್ಯದ ರೂವಾರಿಯಾಗಿದ್ದಾರೆ  ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.

ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ಶ್ರೀಕೃಷ್ಣ ದೇವರಾಯರ 556ನೇ ಜನ್ಮದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಕಲೆ, ಸಾಹಿತ್ಯ, ಪರಂಪರೆಗೆ ಪ್ರೋತ್ಸಾಹ ನೀಡಿದರು. “ಮೂರು ರಾಯರಗಂಡ”, “ಕನ್ನಡರಾಜ್ಯ ರಮಾರಮಣ”, “ಆಂಧ್ರಭೋಜ” ಎಂಬ ಬಿರುದುಗಳು ಹೊಂದಿದ್ದರು. ಹಂಪೆಯನ್ನು ರಾಜಧಾನಿಯಾಗಿ ಆಳ್ವಿಕೆ ಮಾಡಿಕೊಂಡಿದ್ದರು. ಅವರು ಸಾಹಿತ್ಯ ಮತ್ತು ಕಲೆಯ ಪೋಷಕರಾಗಿದ್ದರು. ಅವರ ಆಳ್ವಿಕೆಯಲ್ಲಿ ವಿಜಯನಗರದ ಆಡಳಿತ ಭಾಷೆ ಕನ್ನಡವಾಗಿತ್ತು,ಯು ಮತ್ತು ಕನ್ನಡ ಶಾಸನಗಳು ಹೊರಡಿಸಿದರು. ಅವರ ಆಳ್ವಿಕೆಯ ಕಾಲ ಸುವರ್ಣ ಯುಗವಾಗಿತ್ತು. ಶ್ರೀಕೃಷ್ಣದೇವರಾಯರು ಕನ್ನಡ ನಾಡಿನ ಹೆಮ್ಮೆಯ ದೊರೆಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ ಹಾಗೂ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *