ಸುದ್ದಿ ಸಂಗ್ರಹ ಶಹಾಬಾದ
ಸ್ವ-ಉದ್ಯೋಗದ ಮೂಲಕ ತಮ್ಮ ಬದುಕನ್ನು ತಾವೆ ಕಟ್ಟಿಕೊಳ್ಳುವಂತೆ ಪ್ರೇರೇಪಣೆ ನೀಡುವುದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಉದ್ದೇಶವಾಗಿದೆ ಎಂದು ಧರ್ಮಸ್ಥಳ ಜನಜಾಗೃತಿ ವೇದಿಕೆ ಸದಸ್ಯ ವಾಸುದೇವ ಚವ್ಹಾಣ್ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಜ್ಞಾನ ವಿಕಾಸ ಯೋಜನೆಯಡಿ ಜ್ಞಾನ ವಿಕಾಸ ಕೇಂದ್ರದ ಮಹಿಳೆಯರಿಗೆ ಸ್ವಾವಲಂಬಿ ತರಬೇತಿ ಕ್ಷೇತ್ರದ ಬೀದರ್ ಪ್ರವಾಸ ಅಧ್ಯಯನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರಿಗೆ ವಿದ್ಯೆ, ಸಂಸ್ಕಾರ, ಆರೋಗ್ಯ, ಆಹಾರ ಸೇರಿದಂತೆ ಎಲ್ಲಾ ಜ್ಞಾನವೂ ಅತ್ಯಗತ್ಯ. ಈ ಕಾರಣಕ್ಕಾಗಿಯೇ ಜ್ಞಾನ ವಿಕಾಸ ಯೋಜನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಆದ್ಯತೆ ನೀಡಿದೆ, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡಲು ಸಾಲ ಸೌಲಭ್ಯ ನೀಡುವುದರ ಜೊತೆಗೆ ಸಮಾಜದ ಬಗ್ಗೆ ಕಾಳಜಿ ಯೋಜನೆಯಡಿ ಮಹಿಳೆಯರು ಸ್ವಾವಲಂಬಿಯಾಗಿರುವ ಕ್ಷೇತ್ರಗಳ ಪ್ರವಾಸ ಕೈಗೊಂಡು ಮಹಿಳೆಯರಿಗೆ ಮತ್ತಷ್ಟು ಬಲವರ್ಧನೆ ಮಾಡುವ ಮಹತ್ವಕಾಂಕ್ಷೆ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಅರ್ಚನಾ, ಸ್ಥಳೀಯರಾದ ಸಾಗರ ಸ್ವಾಮಿ, ಸ್ಥಳೀಯ ಸೇವಾ ಪ್ರತಿನಿಧಿಗಳಾದ ಗುರುಬಾಯಿ, ಶಶಿಕಲಾ, ಚಾಲಕ ನಾಗರಾಜ ಪಾಟೀಲ್, ಜ್ಞಾನ ವಿಕಾಸದ ಸದಸ್ಯರು, ಸಂಘದ ಸದಸ್ಯರು ಮತ್ತು ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.