ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕು ಅರಣ್ಯ ವಲಯದ ವತಿಯಿಂದ ಚಿಣ್ಣರ ವನ ದರ್ಶನ ಕಾರ್ಯಕ್ರಮದಡಿ ಬೀದರ್ ಜಿಲ್ಲೆಯ ಕೃಷ್ಣ ಮೃಗ ಸಂರಕ್ಷಿತ ಪ್ರದೇಶ ಮತ್ತು ಅರಣ್ಯ ಪ್ರದೇಶಗಳಿಗೆ ಚಿತ್ತಾಪುರ ತಾಲೂಕಿನ ಡೋಣಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಎರಡು ದಿನದ ಚಿಣ್ಣರ ವನ ದರ್ಶನಕ್ಕೆ ತೆರಳಿದರು.
ಪ್ರವಾಸದ ಕಾರ್ಯಕ್ರಮಕ್ಕೆ ಅರಣ್ಯ ವಲಯ ಅಧಿಕಾರಿ ವಿಜಯಕುಮಾರ ಬಡಿಗೇರ್ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ತಿಳಿಹೇಳುವ ಸಲುವಾಗಿ ಇಲಾಖೆ ವತಿಯಿಂದ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಯ ಸದಸ್ಯ ಶರಣು ಡೋಣಗಾಂವ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ವನಪೂರ, ಎಸ್’ಡಿಎಂಸಿ ಅಧ್ಯಕ್ಷ ಕಾಶಪ್ಪ ಜೆರ್ಕನೂರ್, ವಿಎಸ್ಎಸ್ಎನ್ ಸೊಸೈಟಿಯ ಅಧ್ಯಕ್ಷ ಸಿದ್ದರಾಮ ಮಂಗನೋರ, ಮಾರ್ತಾಂಡ ಪೂಜಾರಿ, ರವಿ ಪೂಜಾರಿ, ನಾಗಪ್ಪ ಬಾನರ್, ಶಾಲಾ ಮುಖ್ಯಗುರು ವಿನೋದ ಗೌಳಿ, ಶಿಕ್ಷಕರಾದ ಹೀರಾಲಾಲ್, ರಾಜಶೇಖರ, ಮಹಾಲಕ್ಷ್ಮಿ, ಲಕ್ಷ್ಮಿ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಸಿಬ್ಬಂದಿಗಳಾದ ಶ್ರೀಕಾಂತ್, ಚಂದ್ರಕಾಂತ್, ತುಕಾರಾಮ, ಜಾಫರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.