ಬೆಂಗಳೂರು: ಹಿರಿಯ ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರಿಗೆ ನಾಡೋಜ ಪಾಟೀಲ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರಧಾನ ಮಂತ್ರಿಯಿಂದ ಮಾಡಲಾಯಿತು.
ನಗರದ ನಯನ ಸಭಾಂಗಣದಲ್ಲಿ ಪತ್ರಕರ್ತರ ವೇದಿಕೆ ಬೆಂಗಳೂರ ವತಿಯಿಂದ ಪತ್ರಿಕಾ ದಿನಾಚರಣೆ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗಡೆ ಹಾಗೂ ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ ಅವರು ” ನಾಡೋಜ ಪಾಟೀಲ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ”ಯನ್ನು ಕಲಬುರಗಿಯ ಹಿರಿಯ ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರಿಗೆ ಪ್ರಧಾನ ಮಾಡಲಾಯಿತು.
ಮಾಧ್ಯಮ ಪ್ರಶಸ್ತಿ ಪುರಸ್ಕೃತರು
ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾದ ಹಾಸನದ ಜನಮಿತ್ರ ಪತ್ರಿಕೆಯ ಸಂಪಾಧಕ ಎಂ.ಬಿ ಮದನ ಗೌಡ, ಕೊಪ್ಪಳದ ಹಿರಿಯ ಪತ್ರಕರ್ತ ವಿ.ಆರ್ ತಾಳಿಕೋಟಿ , ಕಲಬುರ್ಗಿಯ ಹಿರಿಯ ಪತ್ರಕರ್ತ ಮಹಿಪಾಲ ರೆಡ್ಡಿ ಮುನ್ನೂರ್, ಬಿಜಾಪುರ ಜಿಲ್ಲೆಯ ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯಸ್ಥ ಸಂಗಮೇಶ್ ಚೂರಿ, ಬಳ್ಳಾರಿಯ ಗಣಿ ನಾಡ ಪತ್ರಿಕೆಯ ಸಂಪಾದಕ
ವಲಿ ಭಾಷಾ, ಯಾದಗಿರಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ಬಿ.ಎಸ್ ಹಿರೇಮಠ್, ಪಬ್ಲಿಕ್ ಟಿವಿ ಯ ಸೇತುರಾಮ ಅರವಿಂದ್, ರಾಮನಗರ ಜಿಲ್ಲೆಯ ವಿಜಯ ಕರ್ನಾಟಕ ಪತ್ರಿಕೆಯ ರವಿಕಿರಣ್, ಮಂಡ್ಯ ಜಿಲ್ಲೆಯ ಸಂಯುಕ್ತ ಕರ್ನಾಟಕ ಪತ್ರಿಕೆ ರಾಜು ಮಳವಳ್ಳಿ, ಚಾಮರಾಜನಗರ ಜಿಲ್ಲೆಯ ಕಾವೇರಿ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕ ಮಾಹದೇವ ಅವರು ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿಯನ್ನು ಸ್ವೀಕರಿಸಲಿದರು.