ಚಿತ್ತಾಪುರ: ಮೊಹರಂ ಹಬ್ಬವು ಮುಸ್ಲಿಮರು ಮತ್ತು ಹಿಂದೂಗಳು ಸಾಮೂಹಿಕವಾಗಿ ಆಚರಿಸುವ ಹಬ್ಬವಾಗಿದೆ. ಎಲ್ಲಾ ಧರ್ಮದವರು ಪರಸ್ಪರ ಗೌರವ, ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಹಬ್ಬದ ಆಚರಣೆ ಮಾಡಬೇಕು. ಧಾರ್ಮಿಕ ಸೌಹಾರ್ದಕ್ಕೆ ಯಾರೂ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಕಾಳಗಿ ಸಿಪಿಐ ಜಗದೇವಪ್ಪ ಪಾಳಾ ಹೇಳಿದರು.
ತಾಲೂಕಿನ ದಂಡೋತಿ ಗ್ರಾಮದಲ್ಲಿ ಮಾಡಬೂಳ ಪೊಲೀಸ್ ಠಾಣೆ ವತಿಯಿಂದ ಮೊಹರಂ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ – ಮುಸ್ಲಿಂ ಸೌಹಾರ್ದಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಿಎಸ್’ಐಗಳಾದ ಚೇತನ್, ಶೀಲಾದೇವಿ, ಗ್ರಾ.ಪಂ ಅಧ್ಯಕ್ಷೆ ಶಿವಲೀಲಾ ಪಾಳಾ, ಅಶ್ಪಕ್ ಡಕಾರೆ, ಮುನಿಯಪ್ಪ ಕೊಳ್ಳಿ, ಶಿವಕುಮಾರ ಹೊಸ್ಮನಿ, ಇಸಾಕ್ ಯಾದಗಿರಿ, ಶಂಕರ ಕೊಳ್ಳಿ, ಸಾಬಣ್ಣ ಭರಾಟೆ, ಭೀಮಾಶಂಕರ, ವೀರಶೇಟ್ಟಿ, ವಿಜಯನಾರಾಯಣ, ಕಮಲಾಕರ್, ಪ್ರಶಾಂತಕುಮಾರ, ಮಾಳಗೊಂಡ, ಸಂಗಣ್ಣ ಸೇರಿದಂತೆ ಅನೇಕರು ಇದ್ದರು.