ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ

ಸುದ್ದಿ ಸಂಗ್ರಹ

ನವದೆಹಲಿ: ಹಕ್ಕಿ ಡಿಕ್ಕಿಯಾಗಿ ಅಹಮಾದಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನಗೊಂಡಿತಾ ಎಂಬ ಶಂಕೆ ವ್ಯಕ್ತವಾಗಿದೆ.

ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗುವಾಗ ವಿಮಾನದ ಎಂಜಿನ್‌ಗೆ ಪಕ್ಷಿ ಬಡಿದ ಕಾರಣ ಈ ದುರಂತ ಸಂಭವಿಸಬರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಟೇಕಾಫ್‌ ಆಗುವಾಗ ಎಂಜಿನ್‌ಗೆ ಪಕ್ಷಿ ಬಡಿದಾಗ ವಿಮಾನ ಮುಂದಕ್ಕೆ ಹೋಗಬೇಕಾದ ವೇಗ ಅಟೋಮ್ಯಾಟಿಕ್‌ ಆಗಿ ತಗ್ಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಧಾರಣವಾಗಿ ವಿಮಾನದ ಒಂದು ಎಂಜಿನ್‌ಗೆ ಪಕ್ಷಿ ಬಡಿದರೆ ಇನ್ನೊಂದು ಎಂಜಿನ್‌ ಮೂಲಕ ಚಾಲನೆ ಮಾಡಿ ಸಮೀಪದ ನಿಲ್ದಾಣದಲ್ಲಿ ಪೈಲಟ್‌ ತುರ್ತು ಲ್ಯಾಂಡ್‌ ಮಾಡುತ್ತಾರೆ. ಆದರೆ ಇಲ್ಲಿ ಎರಡು ಎಂಜಿನಿಗೆ ಪಕ್ಷಿ ಬಡಿದ ಕಾರಣ ವಿಮಾನ ವೇಗವನ್ನು ಕಳೆದುಕೊಂಡು ಪತನ ಹೊಂದಿರಬಹುದು ಎಂಬ ಅನುಮಾನ ಹಲವರು ವ್ಯಕ್ತಪಡಿಸಿದ್ದಾರೆ. ಈ ರೀತಿ ಎರಡು ಎಂಜಿನಿಗೆ ಪಕ್ಷಿ ಬಡಿಯುವುದು ಅಪರೂಪದಲ್ಲಿ ಅಪರೂಪ.

ವಿಮಾನ ಟೇಕಾಫ್‌ ಆಗಿತ್ತು. ಅದರ ಲ್ಯಾಂಡಿಂಗ್ ಗೇರ್ ಮೇಲಕ್ಕೆತ್ತುವ ಮೊದಲೇ ವಿಮಾನವನ್ನು ಕೆಳಗಿಳಿಯಲು ಪ್ರಾರಂಭಿಸಲಾಗಿತ್ತು. ವಿಮಾನದ ಇಂಜಿನ್ ಶಕ್ತಿಯನ್ನು ಕಳೆದುಕೊಂಡರೆ ಮಾತ್ರ ಹೀಗಾಗುತ್ತದೆ. ತನಿಖೆಯಿಂದ ನಿಖರವಾದ ಕಾರಣ ತಿಳಿಯುವ ಸಾಧ್ಯತೆಯಿದೆ.

ಅಹಮದಾಬಾದ್ ಏರ್‌ಪೋರ್ಟ್‌ನಲ್ಲಿ ಮೊದಲಿಂದಲೂ ಹಕ್ಕಿಗಳ ಸಮಸ್ಯೆ ಇದೆ ಎಂದು ವರದಿಯಾಗುತ್ತಿದೆ.

ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 1:38 ಸುಮಾರಿಗೆ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಗಿದೆ. ಈ ವಿಮಾನದಲ್ಲಿ 10 ಸಿಬ್ಬಂದಿ ಸೇರಿ, 242 ಜನರಿದ್ದರು. ಅದರಲ್ಲಿದ್ದ 110 ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಮಾನದ ಬ್ಲಾಕ್‌ ಬಾಕ್ಸ್‌ ಪರಿಶೀಲನೆ ಬಳಿಕ ಈ ಅವಘಡಕ್ಕೆ ನಿಖರ ಕಾರಣ ತಿಳಿಯಲಿದೆ. ಅಧಿಕಾರಿಗಳು ವಿಮಾನ ದುರಂತದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *