ಬೆಂಗಳೂರು: ಹಿರಿಯ ನಟ ರಮೇಶ್ ಅರವಿಂದ್ ಅಭಿನಯದ 106ನೇ ಸಿನಿಮಾ ದೈಜಿ ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್ ರಿಲೀಸ್ ಇವೆಂಟ್ ಬಳಿಕ ನಟ ರಮೇಶ್ ಅರವಿಂದ್ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದರು. ಮುಖ್ಯವಾಗಿ ಹಿರಿಯ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಬಗ್ಗೆ ಮತ್ತು ಸಮಾಧಿ ನೆಲಸಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ವಿಷ್ಣು ಸರ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದಿನಿ. ಅವರಿಗೆ ಡಾಕ್ಟರೇಟ್ ಬಂದಾಗ ನಾನು ಹೇಳಿದ್ದು ಒಂದೆ, ಅವರಿಗೆ ಡಾಕ್ಟರೇಟ್ ಕೊಡೋಕೆ ಒಂದು ಕಾರಣವಲ್ಲ ನೂರು ಕಾರಣಗಳಿವೆ ಎಂದಿದ್ದೆ. ನೂರು ಸಿನಿಮಾ ಮಾಡಿದ ಅವರಿಗೆ ನೂರು ಕಾರಣ ಇವೆ. ಅವರ ಕೆಲಸಗಳು, ಅವರು ಮಾಡಿದ ಯೋಚನೆಗಳು ನಮಗೆ ಮುಖ್ಯ. ಅವರ ಸ್ಮಾರಕ ಅನ್ನೋದು ಅಭಿಮಾನಿಗಳಿಗೆ ಸಾಮೂಹಿಕ ನೆನಪು. ಅಲ್ಲಿ ಆಗಲ್ಲ ಅಂದಾಗ ಸರ್ಕಾರ ಮೈಸೂರಿನಲ್ಲಿ ಪರ್ಫೆಕ್ಟ್ ಆಗಿ ಮಾಡಿಕೊಟ್ಟಿದೆ. ಮತ್ತೆ ಸ್ಮಾರಕ ಸಿಗುತ್ತೆ ಅಂತಾ ಕೇಳಿಪಟ್ಟೆ. ಏನಾದರೂ ಆಗಲಿ ಗಂಭೀರವಾಗಿ ಆಗಲಿ. ವಿಷ್ಣು ಸರ್ ಅಂದರೆ ಗಾಂಭೀರ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವಿಷ್ಣುವರ್ಧನ್ ಅವರೊಟ್ಟಿಗೆ ಸಿನಿಮಾ ಮಾಡಿರುವ ನಟ ರಮೇಶ್ ಅರವಿಂದ್, ಸಾಹಸ ಸಿಂಹ ಅವರ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬದ ದಿನವೇ ತಮ್ಮ ನಟನೆಯ `ದೈಜಿ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ.