ಕಲಬುರಗಿ: ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ನಿರ್ಧರಿಸಿ, ಅದರ ಸಾಧನೆಗೆ ನಿರಂತರ ಪ್ರಯತ್ನ ಮಾಡಬೇಕು. ಸೃಜನಶೀಲತೆ, ಮಾನವೀಯತೆ, ದೇಶಭಕ್ತಿ, ಛಲಗಾರಿಕೆ, ಧನಾತ್ಮಕ ಚಿಂತನೆ ಬೆಳೆಸಿಕೊಂಡು, ಉನ್ನತವಾದ ಸಾಧನೆ ಮಾಡಬೇಕು ಎಂದು ಚಿಂತಕ ಮಹಾದೇಯ್ಯ ಕರದಳ್ಳಿ ಹೇಳಿದರು.
ನಗರದ ಹೊಸ ಜೇವರ್ಗಿ ರಸ್ತೆಯಲ್ಲಿನ ಗೆಟ್ಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ‘ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ’ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಪ್ರಾವೀಣ್ಯತೆ ಬೆಳೆಸಿಕೊಳ್ಳಬೇಕು. ಸ್ವ-ಅಧ್ಯಯನ ಅಗತ್ಯ. ಸಾಧಿಸುವ ಛಲಗಾರಿಕೆ ಅಗತ್ಯ. ಉದ್ದೇಶ ಸ್ಪಷ್ಟವಾಗಿರಲಿ. ಸದ್ಗುಣಗಳನ್ನು ಮೈಗೂಡಿಸಿಕೊಳ್ಳಿ. ದೇಶದ ಸ್ವಾತಂತ್ರ‍್ಯದ ಶತಮಾನೋತ್ಸವ ವರ್ಷವಾದ 2040ಕ್ಕೆ ಭಾರತ ವಿಶ್ವಗುರುವಾಗಲು ಪ್ರತಿಯೊಬ್ಬ ಭಾರತೀಯ ಶ್ರಮಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಬಿ ಕಂಟೆಗೋಳ, ಸಂಸ್ಥೆಯ ಕಾರ್ಯದರ್ಶಿ ನೇಹಾ ಎಚ್.ಕಂಟೆಗೋಳ, ಉಪನ್ಯಾಸಕರಾದ ಎಚ್.ಬಿ ಪಾಟೀಲ್, ಶಿವಲಿಂಗಪ್ಪ ತಳವಾರ, ಜ್ಯೋತಿ ಎಸ್, ನಾಗಜ್ಯೋತಿ, ರೊಹಿಣಿ ತೋರಣ, ನೀಲಮ್ಮ ಹಿರೇಮಠ, ಆಕಾಶ ಮರಪಳ್ಳಿ, ಉಮಾದೇವಿ ತಿಪ್ಪಾ, ಆಡಳಿತಗಾರ ಭರತ ಮಾಗೊಂಡ, ಸೇವಕಿ ಪದ್ಮವತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ಮಲ್ಲಿಕಾರ್ಜುನ ನಿರೂಪಿಸಿ, ವಂದಿಸಿದನು. ಬಾಲ ಪತ್ರತಿಭೆ ಕಸ್ತೂರಿ ಭರತನಾಟ್ಯ ಪ್ರದರ್ಶಿಸಿದಳು.