ದಾವಣಗೆರೆ: ಬ್ಯಾಂಕ್ ಮ್ಯಾನೇಜರ್ ಒಬ್ಬ ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು ಬರೋಬ್ಬರಿ 49 ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ಜಗಳೂರಿನಲ್ಲಿ ನಡೆದಿದೆ.
ಜಗಳೂರು ಪಟ್ಟಣದ ಕೆಎಲ್‍ಎಂ ಆಕ್ಸಿವಾ ಫಿನ್ ವೆಸ್ಟ್ ಬ್ಯಾಂಕ್ ಈ ವಂಚನೆ ನಡೆದಿದೆ. ಬ್ಯಾಂಕ್‍ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅರವಿಂದ್ ರೆಡ್ಡಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ಅರವಿಂದ್ ರೆಡ್ಡಿ 2024ರ ನವೆಂಬರ್‌ನಲ್ಲಿ ತನ್ನ 9 ಜನ ಸ್ನೇಹಿತರ ಹೆಸರಿನಲ್ಲಿ 84.5 ತೊಲಿ ನಕಲಿ ಬಂಗಾರ ಅಡವಿಟ್ಟು, ಬರೋಬ್ಬರಿ 49 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಕಣ್ಮರೆಯಾಗಿದ್ದ.
ಮ್ಯಾನೇಜರ್‌ನ ಸ್ನೇಹಿತರಿಗೆ ಅಕ್ಸಿವಾ ಬ್ಯಾಂಕ್‍ನಿಂದ ಬಡ್ಡಿ ಹಣ ಕಟ್ಟುವಂತೆ ನೋಟಿಸ್ ಬಂದಾಗ ಪ್ರಕರಣ ಬಯಲಿಗೆ ಬಂದಿದೆ. ತಾವು ಯಾವುದೇ ಬಂಗಾರ ಅಡವಿಟ್ಟಿಲ್ಲ ಎಂದು ಬ್ಯಾಂಕ್‍ಗೆ 9 ಜನ ಸ್ನೇಹಿತರು ಬಂದಿದ್ದಾರೆ. ಈ ವೇಳೆ ವಂಚನೆ ನಡೆದಿರುವುದು ಗೊತ್ತಾಗಿದೆ.
ಈ ಸಂಬಂಧ ಬ್ಯಾಂಕ್‍ನ ಸಹಾಯಕ ವ್ಯವಸ್ಥಾಪಕ ವಸಂತ್ ಕುಮಾರ್, ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.