ವಿದ್ಯಾರ್ಥಿ, ಸಮಾಜಪರ ಕಾಳಜಿಯುಳ್ಳ ಶಿಕ್ಷಕರ ಸಂಖ್ಯೆ ಹೆಚ್ಚಾಗಲಿ

ಜಿಲ್ಲೆ

ಕಲಬುರಗಿ: ರಾಜಶೇಖರ ಗುಂಡದ್ ಅವರು ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಸೇವೆ ಸಲ್ಲಿಸಿದ ಶಾಲೆಗೆ ನಿವೃತ್ತಿಯಾದ ನಂತರವು ದೇಣಿಗೆ ನೀಡಿ ಸದಾ ಅಭಿವೃದ್ಧಿ ಬಯಸುವರಾಗಿದ್ದಾರೆ. ಅವರಲ್ಲಿರುವ ವಿದ್ಯಾರ್ಥಿಗಳ ಬಗ್ಗೆಯಿದ್ದ ಕಾಳಜಿ, ಕಲಿಸುವ ಹಂಬಲ, ಕರ್ತವ್ಯಬದ್ಧತೆ, ಸೇವಾ ಮನೋಭಾವ ಶ್ಲಾಘನೀಯವಾಗಿದೆ. ಅಪರೂಪ ಹಾಗೂ ಮೇರು ವ್ಯಕ್ತಿತ್ವದ ಶಿಕ್ಷಕರ ಸಂಖ್ಯೆ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಾಗಬೇಕಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.

ತಾಲೂಕಿನ ಹತಗುಂದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಇತ್ತೀಚಿಗೆ ವಯೋನಿವೃತ್ತಿ ಹೊಂದಿರುವ ಗುಂಡದ್ ಅವರಿಗೆ ಶನಿವಾರ ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು, ಗೆಳಯರು, ಆಪ್ತರು, ಬಂಧು-ಮಿತ್ರರು, ಇಲಾಖೆಯ ಅಧಿಕಾರಿಗಳ ವತಿಯಿಂದ ಜರುಗಿದ ಹೃದಯಸ್ಪರ್ಷಿ ಸತ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗೌರವಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪದ್ಮಾವತಿ ಆರ್.ಗುಂಡದ, ಮನೋಜ, ಪ್ರಶಾಂತ, ಶ್ವೇತಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *