ಮತಗಳ್ಳತನದ ಬಗ್ಗೆ ದಾಖಲಾತಿ ಇವೆ, ರಾಹುಲ್ ಗಾಂಧಿ ಬಿಡುಗಡೆ ಮಾಡುತ್ತಾರೆ: ಪ್ರಿಯಾಂಕ್ ಖರ್ಗೆ

ರಾಜ್ಯ

ಬೆಂಗಳೂರು: ಮತಗಳ್ಳತನದ ಬಗ್ಗೆ ದಾಖಲಾತಿಗಳು ಇವೆ. ನಾಳೆ ರಾಹುಲ್ ಗಾಂಧಿ ಅದನ್ನು ಬಿಡುಗಡೆ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮಂಗಳವಾರ ರಾಹುಲ್ ಗಾಂಧಿ ಪ್ರತಿಭಟನೆ ಮಾಡುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಮತಗಳವು ಬಗ್ಗೆ ಹೇಳಿದ್ದರು. ಅದರ ಬಗ್ಗೆ ಇಂದು ಸುದ್ದಿಗೋಷ್ಠಿ ಮಾಡಬೇಕಿತ್ತು. ಆದರೆ ಜಾರ್ಖಂಡ್ ಸಿಎಂ ಶಿಬು ಸೊರೇನ್ ಅವರು ತೀರಿಕೊಂಡಿದ್ದಾರೆ. ಹೀಗಾಗಿ ಸುದ್ದಿಗೋಷ್ಠಿ ಮುಂದೂಡಿಕೆಯಾಗಿರಬಹುದು. ಇಲ್ಲದಿದ್ದರೆ ದಾಖಲೆ ಬಿಡುಗಡೆ ಮಾಡುತ್ತಿದ್ದರು ಎಂದರು.

ರಾಹುಲ್ ಗಾಂಧಿ ಪ್ರತಿಭಟನೆ ಮಾಡ್ತಾರೆ. ನಿಮಗೆ ಏನು ದಾಖಲೆ ಬೇಕು ಕೊಡ್ತಾರೆ. ನಿಮ್ಮ ಮುಂದೆ ಬರುವಾಗ ದಾಖಲಾತಿ ಇಟ್ಟುಕೊಂಡು ಬರುತ್ತಾರೆ. ಮತಗಳವು ಹೇಗೆ ಆಗಿದೆ ಎಂದು ಸಾಕ್ಷ್ಯಗಳಿವೆ. ಲೀಗಲ್ ಆಗಿಯೇ ನಾವು ಪ್ರೂವ್ ಮಾಡುತ್ತೆವೆ. ಸುಮ್ಮನೆ ಸುದ್ದಿಗೋಷ್ಠಿ ಮಾಡಿದರೆ ಪ್ರಯೋಜನವೇನು ? ದಾಖಲೆ ಇರೋದ್ರಿಂದಲೇ ಮಾಡ್ತಿರೋದು ಎಂದು ಸ್ಪಷ್ಟಪಡಿಸಿದರು.

ನಾನು ಎಲೆಕ್ಷನ್ ಕಮೀಷನ್‌ಗೆ ದೂರು ಕೊಟ್ಟಿದ್ದೆನೆ. ಅದಕ್ಕೆ ಆಯೋಗ ಇನ್ನೂ ಉತ್ತರ ಕೊಟ್ಟಿಲ್ಲ. ಜಗತ್ತಿನಲ್ಲಿ ತಾಂತ್ರಿಕತೆಯಲ್ಲಿ 4ನೇ ಸ್ಥಾನ ನಮ್ಮದು. ಯಾಕೆ ಆಯೋಗ ನಮ್ಮ ಪ್ರಶ್ನೆಗೆ ಉತ್ತರ ಕೊಡುತ್ತಿಲ್ಲ. ಇವಿಎಂ ಬಗ್ಗೆ ಈಗಲೂ ನಮ್ಮ ಅಭಿಪ್ರಾಯ ಒಂದೆ. ಬಿಜೆಪಿ ಅವರ ಚಿಲುಮೆ ಟ್ರಸ್ಟ್ ಪ್ರಕರಣ ನೆನಪಿದ್ಯಾ ? ಬೇರೆ ಬೇರೆ ಪ್ರಕರಣ ಇಲ್ಲವೇ. ನೋಡೋಣ ಎಲ್ಲವೂ ಹೊರಗೆ ಬರಲಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Leave a Reply

Your email address will not be published. Required fields are marked *