ಕಲಬುರಗಿ: ರುದ್ರಾಕ್ಷಿ ಒಂದು ಪವಿತ್ರ ವಸ್ತುವಾಗಿದ್ದು, ಇದನ್ನು ಧರಿಸುವುದರಿಂದ ಆಧ್ಯಾತ್ಮಿಕ ಮತ್ತು ಭೌತಿಕ ಪ್ರಯೋಜನ ಪಡೆಯಬಹುದು ಎಂದು ಗದ್ದುಗೆ ಮಠದ ಪೂಜ್ಯ ಶ್ರೀ ಚರಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆಯ ವಿದ್ಯಾನಗರ ಕಾಲೋನಿಯಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ 8ರ ವರೆಗೆ ವೆಲ್‌ಫೇರ ಸೊಸೈಟಿಯ ಭಕ್ತರ ಮನೆಗಳಿಗೆ ಹೋಗಿ ರುದ್ರಾಕ್ಷಿ ಧಾರಣೆ ಮಾಡಿ ಮಾತನಾಡಿದದ ಅವರು, ರಕ್ತದೊತ್ತಡ ಮತ್ತು ಚರ್ಮದ ಸಮಸ್ಯೆಗಳಿಗೆ ಪರಿಹಾರ ಇದರಲ್ಲಿವೆ. ಇದು ಆಧ್ಯಾತ್ಮಿಕ ಪ್ರಗತಿಗೆ ಸಹಾಯ ಮಾಡುತ್ತದೆ. ಧ್ಯಾನ ಮತ್ತು ಪ್ರಾರ್ಥನೆಗಳಿಗೆ ಬಳಸಲಾಗುತ್ತಿದೆ. ಜೊತೆಗೆ ನಕರಾತ್ಮಕ ಶಕ್ತಿಗಳಿಂದ ರಕ್ಷಿಸುವುದಲ್ಲದೆ ವೈಜ್ಞಾನಿಕವಾಗಿ ಅನೇಕ ಲಾಭ ಇದರಲ್ಲಿವೆ ಎಂದರು.
ರುದ್ರಾಕ್ಷಿ ಧಾರಣೆ ಕಾರ್ಯಕ್ರಮದ ಪ್ರಥಮ ಭಕ್ತರಾದ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿಯವರು ಈ ಸದ್ಭಾವನಾ ಪಾದಯಾತ್ರೆಯಲ್ಲಿ ಭಾಗವಹಿಸಲು ಬಂದ ಎಲ್ಲಾ ಭಕ್ತರಿಗೆ ಸನಾತನ ಧರ್ಮದ ಭಗವಾ ಟೋಪಿ ಮತ್ತು ಟವೆಲ್ ಹಾಕುವ ಮೂಲಕ ಸ್ವಾಗತಿಸಿದರು.
ಲಲಿತಾ, ಕಮಲಾಕರ ಸಂಗೋಳಗಿ, ಸುನಂದಾ ಕಾಶಿನಾಥ ಚಿನ್ಮಳ್ಳಿ, ವಿಜಯಶ್ರೀ, ಡಾ.ಓಂಪ್ರಕಾಶ ಹೆಬ್ಬಾಳ, ರೇಖಾ ಶಿವರಾಜ ಅಂಡಗಿ ಮತ್ತು ಎಲ್ಲಾ ಭಕ್ತರಿಗೆ ಚರಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ರುಧ್ರಾಕ್ಷಿ ಧಾರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ, ಪ್ರಮುಖರಾದ ನಾಗಭೂಷಣ ಹಿಂದೊಡ್ಡಿ, ಡಾ.ಓಂಪ್ರಕಾಶ ಹೆಬ್ಬಾಳ, ಶಾಂತಯ್ಯ ಬೀದಿಮನಿ, ನಾಗರಾಜ ಹೆಬ್ಬಾಳ, ಅಣವೀರಪ್ಪ ಆಂದೇಲಿ, ಶ್ರೀವಸ್ತ ಸಂಗೋಳಗಿ ಸೇರಿದಂತೆ ಅನೇಕರು ಇದ್ದರು.