ಕಲಬುರಗಿ: ಮನುಷ್ಯನ ಜೀವನದಲ್ಲಿ ನೆಮ್ಮದಿ ಹಾಗೂ ಬದುಕು ನಡೆಸಲು ಶರಣರ ವಚನಗಳು ಸ್ಫೂರ್ತಿಯಾಗಿವೆ ಎಂದು ಉಪನ್ಯಾಸಕ ನಾಗೇಂದ್ರ ಮಸೂತಿ ಹೇಳಿದರು.
ನಗರದ ಜಯನಗರ ಬಡಾವಣೆಯ ಸೋಮಶೇಖರ ಮಾಲಿ ಪಾಟೀಲ ಮನೆಯಲ್ಲಿ ರವಿವಾರ ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಮನೆಯಂಗಳಗಳಲ್ಲಿ ಶ್ರಾವಣ ವಚನೋತ್ಸವ ಕಾರ್ಯಕ್ರಮ ನಿಮಿತ್ಯ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತು ಉಪನ್ಯಾಸ ಮಾಲೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ವಚನಗಳಲ್ಲಿ ಜ್ಞಾನ ಅಡಗಿದೆ ಎಂದರು.
ದೈರ್ಯದಿಂದ ಬದುಕು ನಡೆಸಲು ಶರಣರ ವಚನಗಳು ದಾರಿದೀಪವಾಗಿವೆ. ಪ್ರತಿ ದಿನ ಒಂದು ವಚನ ಓದಿ, ಆಲಿಸಬೇಕು. ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಕೇಳದೇ ಸರ್ಕಾರ ನೀಡಿದೆ, ಸಂತಸ ತಂದಿದೆ ಎಂದರು.
ವಚನಗಳು ಬದುಕುವುದನ್ನು ಕಲಿಸುತ್ತವೆ, ವಚನಗಳು ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು. ಪ್ರತಿಯೊಬ್ಬರು ಜೀವನದಲ್ಲಿ ವಚನಗಳು ಆಳವಡಿಸಕೊಳ್ಳಬೇಕು ಎಂದರು.
ವಚನೋತ್ಸವ ಸಮಿತಿ ಕೋಶಾಧ್ಯಕ್ಷ ವಿಶ್ವನಾಥ ಮಂಗಲಗಿ ಮಾತನಾಡಿದರು. ಉದ್ಯಮಿ ವಿಶ್ವನಾಥ ಕೋರವಾರ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗೇಂದ್ರಪ್ಪ ಮಾಲಿ ಪಾಟೀಲ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಪಾಟೀಲ, ನೂರಂದಯ್ಯ ಸ್ವಾಮಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸೋಮಶೇಖರ ಮಾಲಿ ಪಾಟೀಲ, ಜಗನ್ನಾಥ ರಾಚಟ್ಟಿ, ಶಾಂತಲಿಂಗ ಪಾಟೀಲ ಕೋಳಕುರ, ಮಲ್ಲಿಕಾರ್ಜುನ ಮಾಲಿ ಪಾಟೀಲ, ಹಣಮಂತರಾಯ ಪೋಲಿಸ್ ಪಾಟೀಲ, ಗಣಪತರಾವ ಪಾಟೀಲ, ವಿಶ್ವನಾಥ ಪಾಟೀಲ, ಶಿವರಾಜ ಪಾಟೀಲ, ವೀರಣ್ಣ ತೊರವಿ, ಜಗನ್ನಾಥರೆಡ್ಡಿ, ಸೋಮಣ್ಣ, ಕಲ್ಯಾಣರಾವ ಕಡಗಂಚಿ, ಜಗದೀಶ ಮಂಗೊಂಡ, ವಿಕ್ರಮ ಇಟಗಿ, ವಿಭಾಗಕರ, ಮಲ್ಲಣ್ಣ ಅಲ್ಲಾಪುರ, ಸಂಗಣ್ಣ ಶೆಟಗಾರ, ಅನುರಾಧ ಕಲಬುರಗಿ, ಉಮಾದೇವಿ ಕೊಲ್ಲೂರ ಸೇರಿದಂತೆ ಅನೇಕರು ಇದ್ದರು.
ಕಲ್ಯಾಣಪ್ಪ ಬಿರಾದಾರ ಪ್ರಾರ್ಥಿಸಿದರು, ಸಿದ್ಧಾರಾಮ ಹಂಚನಾಳ ನಿರೂಪಿಸಿದರು, ರಾಜು ಪಾಟೀಲ ವಂದಿಸಿದರು.