ಕಲಬುರಗಿ: ಯಾವುದೆ ಜೀವಿಯು ಜನಿಸಿ, ಬೆಳವಣಿಗೆ ಹೊಂದಿ ಜೀವನ ಸಾಗಿಸಬೇಕಾದರೆ ನಿಸರ್ಗ, ಹವಾಮಾನ ವಾತಾವರಣ ಅವಶ್ಯಕವಾಗಿದೆ. ಸುತ್ತ-ಮುತ್ತಲಿನ ಪರಿಸರ, ವಾತಾವರಣದ ಬಗ್ಗೆ ಮಾಹಿತಿ ನೀಡುವ ಭೌಗೋಳಿಕ ಜ್ಞಾನ ಮಾನವನ ಬದುಕಿಗೆ ಅಗತ್ಯ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಗಂಗಾ ನಗರದ ವಿವೇಕಾನಂದ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಜರುಗಿದ ‘ರಾಷ್ಟ್ರೀಯ ಭೌಗೋಳಿಕ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಭೌಗೋಳವು ನಿರ್ದಿಷ್ಟ ಸ್ಥಳ, ಪ್ರದೇಶ, ಮಾನವ-ಪರಿಸರದ ನಡುವಿನ ಕ್ರಿಯೆಯನ್ನು ತಿಳಿಸುತ್ತದೆ. ಸೌರವ್ಯವಸ್ಥೆ, ಪರಿಸರದ ಮಹತ್ವ ಹಾಗೂ ಕಾರ್ಯಗಳು, ಜನರು ಮತ್ತು ಪ್ರದೇಶಗಳ ಹಿನ್ನಲೆ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ಸೇರಿದಂತೆ ಅನೇಕ ಅಂಶಗಳ ಬಗ್ಗೆ ವಿವರಿಸುವ ಮೂಲಕ ಮಾನವನಿಗೆ ಭೌಗೋಳಶಾಸ್ತ್ರವು ಅತ್ಯಂತ ಅವಶ್ಯಕವಾಗಿದೆ. ಇದರ ಅಧ್ಯಯನ ಮಾಡುವದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಕಾರ್ಯದರ್ಶಿ ಗೊಲ್ಲಾಳಪ್ಪ ಜಮಾದಾರ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಮಲ್ಲಿಕಾರ್ಜುನ ಗುಡಬಾ, ಶಿಕ್ಷಕಿಯರಾದ ನಿಖಿತಾ, ರೂಪಾ ಹಾಗೂ ವಿದ್ಯಾರ್ಥಿಗಳು ಇದ್ದರು.