ಸುದ್ದಿ ಸಂಗ್ರಹ ಶಹಾಬಾದ್
ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಿಯ ವತಿಯಿಂದ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆ, ಮಹಾಪಡಿಪೂಜೆ ಮತ್ತು ಕುಂಕುಮಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಕರ ಸಂಕ್ರಾಂತಿ ನಂತರದ ಪುಣ್ಯಕಾಲದಲ್ಲಿ ನಡೆಯುವ ಪಡಿಪೂಜೆಯು ಅತ್ಯಂತ ಪವಿತ್ರವಾಗಿದ್ದು, ಹದಿನೆಂಟು ಮೆಟ್ಟಿಲುಗಳಿಗೆ ವಿಶೇಷವಾದ ಹೂವಿನ ಅಲಂಕಾರ ಮತ್ತು ದೀಪಾರಾಧನೆಯೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆಯಿಂದಲೆ ಗಣಪತಿ ಪೂಜೆ, ಅಭಿಷೇಕ ಮತ್ತು ಭಕ್ತಾದಿಗಳಿಂದ ಸಾಮೂಹಿಕ ಕುಂಕುಮಾರ್ಚನೆ ಜರುಗಲಿದೆ.
ಮಹಾಪಡಿ ಪೂಜೆಯಲ್ಲಿ ಭಜನಾ ಮಂಡಳಿಗಳಿಂದ ಭಜನೆ, ನಂತರ ಮಹಾಪ್ರಸಾದ ವಿನಿಯೋಗವಿರುತ್ತದೆ. ನಗರ ಮತ್ತು ಸುತ್ತಮುತ್ತಲಿನ ಅಯ್ಯಪ್ಪ ಮಾಲಾಧಾರಿಗಳು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಶಹಾಬಾದ ಅಯ್ಯಪ್ಪ ಸ್ವಾಮಿ ಸನ್ನಿಧಿಯ ಸೇವಾ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಮಲ್ಲಿಕಾರ್ಜುನ ಇಂಗಳೇಶ್ವರ ಗುರುಸ್ವಾಮಿ, ಬಸವರಾಜ ಶೇರಿಕರ ಸ್ವಾಮಿ, ಡಾ.ವೆಂಕಟೇಶ ನಾಯಕೋಡಿ ಸ್ವಾಮಿ, ಡಾ.ಸಂಜಯ ಜಿಂಗಾಡೆ ಸ್ವಾಮಿ, ಬಸವರಾಜ ರೆಡ್ಡಿ ಸ್ವಾಮಿ,
ಸುರೇಶ ಕುಂಟನಸ್ವಾಮಿ ಮಾಹಿತಿ ನೀಡಿದರು.
ಮಹಾಪಡಿ ಪೂಜೆ, ಕುಂಕುಮಾರ್ಚನೆ, ಭಜನೆ ಮತ್ತು ಪ್ರಸಾದ ವಿನಿಯೋಗದ ಹೆಚ್ಚಿನ ಮಾಹಿತಿಗಾಗಿ 9632485501, 9448651899, 9880219075 ಸಂಪರ್ಕಿಸಬಹುದು