ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್ ಕಾಳಸಂತೆ ಮಾರಾಟದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಟಿಕೆಟ್ ಮಾರಾಟ ಮಾಡುವಾಗ ಇಬ್ಬರು ಕಾನ್ಸ್‌ಟೇಬಲ್ ಸಿಕ್ಕಿಬಿದ್ದಿದ್ದು, ಈ ಸಂಬಂಧ ಗೋವಿಂದರಾಜ ನಗರದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇದೀಗ ಇಬ್ಬರು ಪೊಲೀಸ್ ಪೇದೆಗಳನ್ನು ಸಸ್ಪೆಂಡ್ ಮಾಡಲಾಗಿದೆ. ಹಲಸೂರು ಸಂಚಾರಿ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ರವಿಚಂದ್ರ ಹಾಗೂ ಟಿಎಂಸಿ ಸಿಬ್ಬಂದಿ ವೆಂಕಟಗಿರಿಗೌಡನನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ಅನುಚೇತ್ ಆದೇಶ ಹೊರಡಿಸಿದ್ದಾರೆ.
ಮೇ 17 ರಂದು ಆರ್’ಸಿಬಿ ಮತ್ತು ಕೆಕೆಆರ್ ನಡುವೆ ಪಂದ್ಯ ಇತ್ತು. ಅಂದು ವಿಜಯ ನಗರದ ನಚೀಕೆತ ಪಾರ್ಕ್ ಬಳಿ ಐಪಿಎಲ್ ಟಿಕೆಟ್ ಮಾರಾಟ ಮಾಡುವಾಗ ರವಿಚಂದ್ರ ಹಾಗೂ ವೆಂಕಟಗಿರಿಗೌಡ ಇತರರೊಂದಿಗೆ ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿ ಬಿದಿದ್ದಾರೆ. ಈ ಸಂಬಂಧ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಅಲ್ಲದೆ ಬಂಧಿತರಿಂದ 20 ಸಾವಿರ ನಗದು, 61 ಐಪಿಎಲ್ ಟಿಕೆಟ್’ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇನ್ನು ಟಿಕೆಟ್ ಮಾರಾಟ ದಂಧೆ ಪ್ರಕರಣದಲ್ಲಿ ಶಂಕರ್, ಸುರೇಶ್ ಎನ್ನುವರನ್ನು ಬಂಧಿಸಲಾಗಿತ್ತು. ಆದರೆ ಪೊಲೀಸ್ ಕಾನ್ಸ್‌ಟೇಬಲ್ ರವಿಚಂದ್ರ ಹಾಗೂ ವೆಂಕಟಗಿರಿಗೌಡನನ್ನು ಬಂಧಿಸದೆ ಕೇವಲ ನೋಟಿಸ್ ನೀಡಲಾಗಿತ್ತು. ಆದರೆ ಇದೀಗ ಹಲಸೂರು ಸಂಚಾರಿ ಠಾಣೆ ಪೊಲೀಸ್ ಕಾನ್ಸ್ ಟೇಬಲ್ ರವಿಚಂದ್ರ ಹಾಗೂ ಟಿಎಂಸಿ ಸಿಬ್ಬಂದಿ ವೆಂಕಟಗಿರಿಗೌಡನನ್ನು ಸಸ್ಪೆಂಡ್ ಮಾಡಲಾಗಿದೆ.
ಮೇ 17 ರಂದು ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿನ ಆರ್ ಸಿಬಿ ಹಾಗೂ ಕೆ.ಕೆ.ಆರ್ .ಪಂದ್ಯ ಇತ್ತು. ಈ ಮ್ಯಾಚ್ ಟಿಕೆಟ್’ಗಾಗಿ ಭಾರಿ ಬೇಡಿಕೆ ಇತ್ತು. ಇದನ್ನೆ ಬಂಡವಾಳ ಮಾಡಿಕೊಂಡ ಖದೀಮ ಪೊಲೀಸರು ಸುಮಾರು 61 ಟಿಕೆಟ್ ಕಾಳಸಂತೆಯಲ್ಲಿ ಮಾರಾಟ ಮಾಡಲು ಬಂದಾಗ ಸಿಕ್ಕಿ ಬಿದ್ದಿದ್ದಾರೆ. ಕಡಿಮೆ ಹಣದ ಟಿಕೆಟ್ ಅನ್ನು ಹೆಚ್ಚಿನ ದರಕ್ಕ ಮಾರಾಟ ಮಾಡಿ ಹಣ ಸಂಪಾದನೆಗೆ ಮುಂದಾಗಿದ್ದರು. ಆದರೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಕೆಲಸದಿಂದಲೆ ಅಮಾನತುಗೊಂಡಿದ್ದಾರೆ.