ವಾಡಿ: ಪಟ್ಟಣದ ಪುರಸಭೆ ಚುನಾವಣೆಗಾಗಿ ವಾರ್ಡ್‌ವಾರು ಮೀಸಲಾತಿ ಪಟ್ಟಿ ಫೆ.17 ರಂದು ಪ್ರಕಟಿಸಿರುವದರಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ, ಅದನ್ನು ಪುನರ್ ಪರಿಶೀಲಿಸಿ ಸರಿಪಡಿಸಿ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಮೀಸಲಾತಿ ನಿಗದಿ ಮಾಡಿರುವ ಕ್ರಮವು ತಾರತಮ್ಯದಿಂದ ಕೊಡಿರುವದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಹಿಂದುಳಿದ ವರ್ಗಕ್ಕೆ ಅಧಿಕಾರ ವಂಚಿಸುವ ಮೀಸಲಾತಿ ಇದಾಗಿದೆ ಎಂದರು.
ಈಗಾಗಲೆ ಇದೆ ರೀತಿ ಮೀಸಲಾತಿ ಪ್ರಕಟವಾಗಿದ್ದ ಸಲುವಾಗಿ ಪಟ್ಟಣದ ಮುಖಂಡರೊಬ್ಬರು ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಒಂದು ವರ್ಷ ಚುನಾವಣೆ ಮುಂದೂಡಿಕೆಯಾಯಿತು. ಈ ರೀತಿ ಮೀಸಲಾತಿ ಪ್ರಕಟಿಸಿ ಮತ್ತೆ ಚುನಾವಣೆ ಮುಂದೆ ಹಾಕುವ ತಂತ್ರ ಈ ಕ್ರಮದ ಹಿಂದಿರುವುದು ಸುಸ್ಪಷ್ಟವಾಗಿದೆ. ಚುನಾವಣೆಯಲ್ಲಿ ಎಲ್ಲಾ ಸಮುದಾಯದವರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಮೀಸಲಾತಿ ಸೌಲಭ್ಯ ಸಂವಿಧಾನ ಒದಗಿಸದೆ, ಆದರೆ ವಿನಾಕಾರಣ ಗೊಂದಲ ಸೃಷ್ಟಿಸುವಂತ ಕೆಲಸ ನಗರಾಭಿವೃದ್ಧಿ ಇಲಾಖೆಯಿಂದಾಗುತ್ತಿದೆ. ಪಟ್ಟಣದ ವಾರ್ಡ್ ಗಳ ಜಾತಿವಾರು ಅನುಗುಣವಾಗಿ ಮೀಸಲಾತಿ ನಿಗದಿ ಮಾಡಬೇಕು ಎನ್ನುವದು ಸಂವಿಧಾನದ ನಿಯಮ. ಹಾಲಿ ಮೀಸಲಾತಿ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸದೇ ಕೆಲ ಅಧಿಕಾರಿಗಳ ಬೇಜವಬ್ದಾರಿ ತನದಿಂದ ಮತ್ತೆ 23 ವಾರ್ಡ್‌ಗಳಿಗೆ ನಿಗದಿ ಮಾಡಿದ ಮೀಸಲಾತಿ ಯಾವುದೆ ಜಾತಿವಾರು ನಿಯಮಗಳಿಗೆ ಅನುಗುಣವಾಗಿಲ್ಲ ಇದನ್ನು ತಾವು ಮತ್ತೊಮ್ಮೆ ಮರುಪರಿಶೀಲನೆ ಮಾಡಿ ಎಂದು ಹೇಳಿದ್ದಾರೆ.
ಬಹುದಿನಗಳಿಂದ ಪುರಸಭೆ ಚುನಾವಣೆ ಇಲ್ಲದೆ ಪಟ್ಟಣದ ಅಭಿವೃದ್ಧಿ ಕುಂಠಿತವಾಗುತ್ತಿರುವುದರ ಜೊತೆಗೆ ಇಲ್ಲಿನ ಕೆಲ ಅಧಿಕಾರಿಗಳು ಪುರಸಭೆ ಸಂಪತ್ತಿನ ಹಗಲು ದರೋಡೆಯಲ್ಲಿ ನಿರತರಾಗಿದ್ದಾರೆ. ಇದನ್ನು ತಡೆಯಲು
ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕರ್ತವ್ಯ ಪ್ರಜ್ಞೆಯೊಂದಿಗೆ ಮುತುವರ್ಜಿಯಿಂದ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸುವಂತೆ ಕ್ರಮ ಕೈಗೊಳ್ಳಿ.
ಹಿಂದುಳಿದ ವರ್ಗಗಳಿಗೆ ನ್ಯಾಯ ಸಮ್ಮತ ಮೀಸಲಾತಿ ಒದಗಿಸಿ ಆದಷ್ಟು ಬೇಗನೆ ಚುನಾವಣೆ ಘೋಷಿಸಿ ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.