3.5 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್‌ 6.6 ಕೋಟಿಗೆ ಮಾರಿದ ಅಕ್ಷಯಕುಮಾರ

Uncategorized

ಮುಂಬೈ: ಬಾಲಿವುಡ್ ನಟ ಅಕ್ಷಯಕುಮಾರ ಅವರು ಮುಂಬೈನಲ್ಲಿರುವ ಎರಡು ಅಪಾರ್ಟ್‌ಮೆಂಟ್‌ ಅನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. 3.5 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್‌ ಅನ್ನು 6.6 ಕೋಟಿಗೆ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ.

ಮುಂಬೈನಲ್ಲಿ ಬೊರಿವಲಿಯಲ್ಲಿ ಎರಡು ಅಪಾರ್ಟ್‌ಮೆಂಟ್‌ ಮಾರಾಟ ಮಾಡುವ ಮೂಲಕ 6.6 ಕೋಟಿ ರೂ. ಗಳಿಸಿದ್ದಾರೆ. ಇವುಗಳಲ್ಲಿ ಒಂದು 5.35 ಕೋಟಿಗೆ ಮಾರಾಟವಾಗಿದೆ. ಮತ್ತೊಂದು 1.25 ಕೋಟಿಗೆ ಮಾರಾಟವಾಗಿದೆ.

ಮೂಲಗಳ ಪ್ರಕಾರ, 5.35 ಕೋಟಿಗೆ ಮಾರಾಟವಾಗಿರುವ ಅಪಾರ್ಟ್‌ಮೆಂಟ್‌ ಅನ್ನು ನವೆಂಬರ್‌ 2017ರಲ್ಲಿ 2.82 ಕೋಟಿಗೆ ಖರೀದಿಸಿದ್ದರು ಅಕ್ಷಯ. ಈಗ ಅದರ ಬೆಲೆ 89%ರಷ್ಟು ಹೆಚ್ಚಾಗಿದೆ. ಈ ಅಪಾರ್ಟ್‌ಮೆಂಟ್‌ 1,080 ಚದರ ಅಡಿ ಹೊಂದಿದೆ. ಇದರ ಮುದ್ರಾಂಕ ಶುಲ್ಕ 32.1 ಲಕ್ಷ ರೂ ಮತ್ತು ನೋಂದಣಿ ಶುಲ್ಕ 30,000 ರೂ ಆಗಿದೆ.

ಮತ್ತೊಂದು ಅಪಾರ್ಟ್‌ಮೆಂಟ್‌ 1.25 ಕೋಟಿ ರೂ.ಗೆ ಮಾರಾಟವಾಗಿದೆ. 2017ರಲ್ಲಿ ಇದನ್ನು 67.19 ಲಕ್ಷ ರೂ.ಗೆ ಖರೀದಿಸಲಾಗಿದೆ. ಈ ಅಪಾರ್ಟ್‌ಮೆಂಟ್‌ 252 ಚದರ ಅಡಿ ಹೊಂದಿದೆ. ಇದರ ಮುದ್ರಾಂಕ ಶುಲ್ಕ 7.5 ಲಕ್ಷ ರೂ ಮತ್ತು ನೋಂದಣಿ ಶುಲ್ಕ 30,000 ರೂ ಆಗಿದೆ.

Leave a Reply

Your email address will not be published. Required fields are marked *