ಅತ್ತಿಗೆಯನ್ನು ಮಂಚಕ್ಕೆ ಕರೆದ ಮೈದುನ: ಒಪ್ಪದಿದ್ದಕ್ಕೆ ಎಲ್ಲೆಂದರಲ್ಲಿ ಕಚ್ಚಿದ ಕಾಮುಕ

ರಾಜ್ಯ

ಧಾರವಾಡ: ಅತ್ತಿಗೆ ಎಂದರೆ ತಾಯಿ ಸಮಾನ ಅಂತಾರೆ. ಹೀಗಾಗಿ ಅತ್ತಿಗೆಗೆ ಯಾವಾಗಲೂ ತಾಯಿಯ ಸ್ಥಾನಮಾನ ನೀಡಲಾಗುತ್ತದೆ. ಅದಕ್ಕಾಗಿಯೆ ಅವರ ಬಗ್ಗೆ ಯಾವಾಗಲೂ ಗೌರವದ ಭಾವನೆ ಇರಬೇಕು. ಆದರೆ ಇಲ್ಲೊರ್ವ ವ್ಯಕ್ತಿ, ಅಣ್ಣನ ಹೆಂಡತಿ‌ ಮೇಲೆ ಕಣ್ಣು ಹಾಕಿ ಲೈಂಗಿಕವಾಗಿ ಸಹಕರಿಸುವಂತೆ ಕರೆದಿದ್ದಾನೆ.

ಆದರೆ ಇದಕ್ಕೆ ನಿರಾಕರಿಸಿದ ಅತ್ತಿಗೆ ಮೇಲೆ ಮೈದುನ ಎಲ್ಲೆಂದರಲ್ಲಿ ಕಚ್ಚಿ ಮೃಗದ ವರ್ತನೆ ತೋರಿದ್ದಾನೆ‌. ಈ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸ ಕಟ್ಟಿ ಗ್ರಾಮದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಕಟ್ಟಿ ನಿವಾಸಿ ರಮೇಶ ಮೇಗುಂಡಿಗೆ ಈಗಾಗಲೆ ಮದುವೆಯಾಗಿದೆ. ಆದರೂ ಸಹ ಸ್ವಂತ ಅತ್ತಿಗೆಯನ್ನು (ಅಣ್ಣನ ಹೆಂಡತಿ) ಮಂಚಕ್ಕೆ ಕರೆದಿದ್ದಾನೆ. ಆದರೆ ಇದಕ್ಕೆ ಅತ್ತಿಗೆ ಸವಿತಾ ಬಸಪ್ಪ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ರಮೇಶ, ಅತ್ತಿಗೆಯನ್ನು ಹಿಡಿದುಕೊಂಡು ಎಲ್ಲೆಂದರಲ್ಲಿ ಕಚ್ಚಿದ್ದಾನೆ. ಮುಖ, ಎದೆ ಭಾಗ, ಗಲ್ಲಕ್ಕೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಳಿಕ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಆಗ ಅಕ್ಕಪಕ್ಕದ ಜನರು ಏನಾಯ್ತು ಎಂದು ಓಡೋಡಿ ಬಂದಿದ್ದು, ಗಾಯಗೊಂಡಿದ್ದ ಸವಿತಾಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸವಿತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಂದೆಡೆ ಕಾಮುಕ ಮೈದುನ ಪರಾರಿಯಾಗಿದ್ದಾನೆ.

ಸವಿತಾ ತನ್ನ ಅಣ್ಣನ ಹೆಂಡತಿ ಎನ್ನುವುದನ್ನು ಮರೆತ ರಮೇಶ, ನಿತ್ಯವೂ ಮಂಚಕ್ಕೆ ಕರೆಯುತ್ತಿದ್ದನಂತೆ. ಆದರೆ ಇದಕ್ಕೆ ಸವಿತಾ ನಿರಾಕರಿಸುತ್ತಾ ಬಂದಿದ್ದಾರಂತೆ. ಆದರೆ ರವಿವಾರ ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮತ್ತೆ ಸವಿತಾಳನ್ನು ಕರೆದಿದ್ದಾನೆ. ಇದಕ್ಕೆ ಸವಿತಾ ಒಪ್ಪದಿದ್ದಾಗ ಬಲವಂತ ಮಾಡಿದ್ದು, ಈ ವೇಳೆ ಎಲ್ಲೆಂದರಲ್ಲಿ ಕಚ್ಚಿದ್ದಾನೆ. ಇದರಿಂದ ಮುಖ, ಎದೆ ಭಾಗ, ಗಲ್ಲಕ್ಕೆ ಕಚ್ಚಿ ಗಾಯಗೊಳಿಸಿದ್ದಾನೆ, ಸದ್ಯ ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸಕಟ್ಟಿ ಗ್ರಾಮದಲ್ಲಿ ಸಹೋದರಾರ ಬಸಪ್ಪ ಹಾಗೂ ರಮೇಶ ಇಬ್ಬರು ಕೂಲಿ‌ ಕೆಲಸ ಮಾಡಿಕೊಂಡು ಜೀವನ ಮಾಡತಿದ್ದಾರೆ. ಇಬ್ಬರಿಗೂ ಹೆಚ್ಚು ಕಡಿಮೆ ಹತ್ತು ವರ್ಷದ ಹಿಂದೆ ಮದುವೆಯಾಗಿತ್ತು, ಒಂದೆ ಮನೆಯಲ್ಲಿ ವಾಸವಾಗಿದ್ದು. ಇನ್ನು ಬಸಪ್ಪನ ಪತ್ನಿ ಸವಿತಾ ಗಾರ್ಮೆಂಟ್ಸ್ ಕೆಲಸ ಮಾಡುತಿದ್ದರು. ಒಂದೆ ಮನೆಯಲ್ಲಿ ಇದ್ದ ಕಾರಣ, ಸವಿತಾ ಮೇಲೆ ಮೈದುನ ರಮೇಶ ಕಣ್ಣು ಹಾಕಿದ್ದ, ಯಾರು ಇಲ್ಲದ ಸಮಯದಲ್ಲಿ ಜಗಳ ತಗೆದು ನನ್ನ ಜೊತೆ ಬಾ ಎಂದು ಕರೆಯುವುದು ಮಾಡತಿದ್ದನಂತೆ. ಇದಕ್ಕೆ ಸವಿತಾ ನಿರಾಕರಣೆ ಮಾಡುತ್ತಾ ಬಂದಿದ್ದಾರಂತೆ.

ಆದರೆ ರವಿವಾರ ಮುಂಜಾನೆ ಇದೆ ವಿಚಾರಕ್ಕೆ ಗಲಾಟೆಯಾಗಿದ್ದು, ರಮೇಶ ಅತ್ತಿಗೆ ಎಂದು ನೋಡದೆ ಮೃಗದ ವರ್ತನೆ ತೋರಿದ್ದಾನೆ. ಪೈಪ್ ನಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮನೆಯಲ್ಲಿ ಅತ್ತಿಗೆ ಮೇಲೆ ಹಲ್ಲೆ ಮಾಡಿ ರಮೇಶ ಪರಾರಿಯಾಗಿದ್ದಾನೆ. ಇನ್ನು ಸವಿತಾ ಸಂಬಂಧಿಕರು ಕುಂದಗೋಳ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *