ವಾಡಿ: ಮಾಜಿ ಶಾಸಕ ದಿ.ವಾಲ್ಮೀಕ ನಾಯಕರ ಪುಣ್ಯಸ್ಮರಣೆ ನಿಮಿತ್ಯ ಕಲಬುರಗಿಯ ಅನುಗ್ರಹ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು, ಯುವ ಮುಖಂಡ ವಿಠಲ ವಾಲ್ಮೀಕ ನಾಯಕ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಮಾಜಿ ಶಾಸಕ ದಿ.ವಾಲ್ಮೀಕ ನಾಯಕರ ನಾಲ್ಕನೇ ಪುಣ್ಯಸ್ಮರಣೆ ಅಂಗವಾಗಿ ವಾಲ್ಮೀಕ ನಾಯಕರ ಅಭಿಮಾನಿ ಬಳಗ ಹಾಗೂ ಕಲಬುರಗಿಯ ಪ್ರತಿಷ್ಠಿತ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಸುಮಾರು 276 ಜನರಿಗೆ ನೇತ್ರ ತಪಾಸಣೆ ಮಾಡಲಾಯಿತು.
ಅದರಲ್ಲಿ 41 ಜನರು ಶಸ್ತ್ರಚಿಕಿತ್ಸೆಗೆ ತೆರಳಿದ್ದರು. 19 ಜನರ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇನ್ನು ಉಳಿದ ಜನರನ್ನು ಅತಿ ಶೀಘ್ರದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಬಗ್ಗೆ ವೈದ್ಯರೊಂದಿಗೆ ವಿಠಲ ವಾಲ್ಮೀಕ ನಾಯಕ ಚರ್ಚಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಅನುಗ್ರಹ ಆಸ್ಪತ್ರೆಯ ವೈದ್ಯರು ಇದ್ದರು.

 
	 
						 
						