ಇಂಜಿನಿಯರ್ ನೇಮಕಾತಿ ಆಕ್ರಮ: ಎಐಡಿವೈಒ ಖಂಡನೆ

ಪಟ್ಟಣ

ಸುದ್ದಿ ಸಂಗ್ರಹ ಶಹಾಬಾದ

ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ 24 ನೇಮಕಾತಿಯಲ್ಲಿ 10 ಅಭ್ಯರ್ಥಿಗಳ ನೇಮಕಾತಿ ನಡೆಸಿರುವದು ಭಾರಿ ಅಕ್ರಮ ಇದನ್ನು ಎಐಡಿವೈಓ ತೀವ್ರವಾಗಿ ಖಂಡಿಸುತ್ತದೆ ಎಂದು ಎಐಡಿವೈಒ ಶಹಾಬಾದ ಕಾರ್ಯದರ್ಶಿ ರಮೇಶ ದೇವಕರ್
ಹೇಳಿದ್ದಾರೆ.‌

24 ಹುದ್ದೆಗಳ ನೇಮಕಾತಿಯಲ್ಲಿ 2023 ಜುಲೈ 1 ಮತ್ತು 2
ರಂದು ಪರೀಕ್ಷೆ ನಡಸಿ ಸೆಪ್ಟೆಂಬರ್ ತಿಂಗಳಲ್ಲಿ ಫಲಿತಾಂಶ
ಪ್ರಕಟಿಸಲಾಗಿತ್ತು. ಈ ಕುರಿತು ಅನೇಕ ದೂರು ಬಂದಿದ್ದರಿಂದ ಕೆಪಿಎಸ್‌ಸಿ ನೇಮಿಸಿದ ತನಿಖಾ ಸಮಿತಿ ಯಾವುದೇ ಪ್ರಲೋಭನಕ್ಕೆ ಒಳಗಾಗದೆ ಪ್ರಕರಣವನ್ನು ಬಯಲಿಗೆ ಎಳೆದಿರುವದು ಪ್ರಶಂಶನೀಯವಾಗಿದೆ. ತನಿಖಾ ಸಂಸ್ಥೆ ಸಮಿತಿ ನೀಡಿದ ಎಲ್ಲಾ ಶಿಫಾರಸ್ಸುಗಳನ್ನು ರಾಜ್ಯ ಸರಕಾರ ಕೂಡಲೆ ಜಾರಿಗೆ ತರಬೇಕು, ನಿಷ್ಪಕ್ಷಪಾತವಾದ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾದ 10 ಅಭ್ಯರ್ಥಿಗಳಿಗೆ ಪ್ರತ್ಯಕ್ಷವಾಗಿ, ಪ್ರೋಕ್ಷವಾಗಿ ಸಹಕರಸಿದ ಎಲ್ಲರನ್ನು ಬಯಲಿಗೆಳೆದು, ಉಗ್ರ ನಿದರ್ಶನೀಯ ಶಿಕ್ಷೆ ಅಗುವಂತೆ ನೋಡಿಕೊಳ್ಳಬೇಕು ಎಂದು ಸಂಘಟನೆ ವತಿಯಿಂದ ರಾಜ್ಯ ಸರಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *